Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ ‘ಬಂಟ ಕಲಾ ಸಂಭ್ರಮ’
    Competition

    ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ ‘ಬಂಟ ಕಲಾ ಸಂಭ್ರಮ’

    September 8, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಆಯೋಜಿಸಿದ್ದ ‘ಬಂಟ ಕಲಾ ಸಂಭ್ರಮ’ ಭಾರತ ದರ್ಶನ ಕಲ್ಪನೆಯ ಸ್ಪರ್ಧೆಯು ದಿನಾಂಕ 03-09-2023ರಂದು ನಡೆಯಿತು.

    ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘ ಪ್ರದರ್ಶಿಸಿದ ‘ಭಾರತ ದರ್ಶನ’ ಪ್ರಹಸನವು ಪ್ರಥಮ ಸ್ಥಾನದೊಂದಿಗೆ ರೂ.1 ಲಕ್ಷ ಬಹುಮಾನ ಪಡೆದುಕೊಂಡಿತು. ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಪ್ರಶಸ್ತಿ ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ ಹಾಗೂ ಪದಾಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.

    ಸಮಾರಂಭದಲ್ಲಿ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಭಂಡಾರಿ ಬಿಲ್ಡರ್ಸ್ ಮಾಲಕ ಲಕ್ಷ್ಮೀಶ ಭಂಡಾರಿ, ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಶೆಟ್ಟಿ ಕಟೀಲು, ಗಣೇಶೋತ್ಸವ ಸಮಿತಿಯ ಜಿಲ್ಲಾ ಸಂಚಾಲಕ ನಾಗರಾಜ ಶೆಟ್ಟಿ, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಸುಧಾಕರ ಪೂಂಜ, ಆಶಾಜ್ಯೋತಿ ರೈ ಮೊದಲಾದವರು ಉಪಸ್ಥಿತರಿದ್ದರು.

    ಮೈಮ್ ರಮೇಶ್ ರಂಗಾಯಣ, ಸುರೇಂದ್ರನಾಥ ಶೆಟ್ಟಿ ಮಾರ್ನಾಡ್ ಹಾಗೂ ಅವಿನಾಶ್ ಕಾಮತ್ ತೀರ್ಪುಗಾರರಾಗಿದ್ದರು. ಕಿರಣ್ ಪಕ್ಕಳ ಮತ್ತು ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ನಿರ್ವಹಿಸಿದರು.

    ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ ಪ್ರಥಮ, ಬೆಳ್ತಂಗಡಿ ಬಂಟರ ಸಂಘ ದ್ವಿತೀಯ ಹಾಗೂ ಉಳ್ಳಾಲ ಬಂಟರ ಸಂಘ ತೃತೀಯ ಪ್ರಶಸ್ತಿಯನ್ನು ಪಡೆಯಿತು. ಸುರತ್ಕಲ್ ಬಂಟರ ಸಂಘ ತುಂಗಭದ್ರಾ ಹೆಸರಿನಲ್ಲಿ ಪ್ರಸ್ತುತ ಪಡಿಸಿದ ಕಲಾಹಂದರದಲ್ಲಿ ಭರತರಾಜನಿಂದ ನಮ್ಮ ರಾಷ್ಟ್ರ ಭಾರತವಾಯಿತು ಎಂಬ ನೃತ್ಯದ ಮೂಲಕ ಪ್ರಾರಂಭಗೊಂಡು, ದೇಶದಲ್ಲಿರುವ ಬುಡಕಟ್ಟು ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವ ಜವಾಬ್ದಾರಿಯನ್ನು ನಾಗರಿಕ ಸಮಾಜ ಹೊರಬೇಕು, ಜೊತೆಗೆ ಆಧುನಿಕತೆಯ ಸೋಗಿನಲ್ಲಿ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ವೈಭವ ನಶಿಸಿ ಹೋಗಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲಾಯಿತು. ಇಪ್ಪತ್ತು ನಿಮಿಷ ಅವಧಿಯ ‘ಭಾರತ ದರ್ಶನ’ದಲ್ಲಿ ಎಪ್ಪತ್ತು ಮಂದಿ ಮಕ್ಕಳೂ ಸೇರಿ ಒಟ್ಟು 205 ಕಲಾವಿದರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleತೆಕ್ಕಟ್ಟೆಯಲ್ಲಿ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ 
    Next Article ಸುಳ್ಯ ಕಸಾಪದಿಂದ ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಹಾಗೂ ಲಕ್ಷ್ಮೀಶ ಚೊಕ್ಕಾಡಿಯವರಿಗೆ ಸನ್ಮಾನ 
    roovari

    Add Comment Cancel Reply


    Related Posts

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ರಾಷ್ಟ್ರೀಯ ಜಾನಪದ ಲೋಕೋತ್ಸವ’ | ಆಗಸ್ಟ್ 10

    August 9, 2025

    ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 06

    August 9, 2025

    ಒಡಿಯೂರು ಶ್ರೀಕ್ಷೇತ್ರದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್ ನ ಎರಡು ನಾಟಕಗಳಿಗೆ ಪ್ರಶಸ್ತಿ

    August 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.