ಬೈಂದೂರು : ಲಾವಣ್ಯ (ರಿ.) ಬೈಂದೂರು ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಶೇರುಗಾರ್ ಬಿಜೂರು, ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಹಾಗೂ ಗುರುರಾಜ್ ಪಂಜು ಪೂಜಾರಿ ಇವರ ಸಂಯುಕ್ತ ಪ್ರಾಯೋಜಕತ್ವದಲ್ಲಿ ದಿ. ಕೂರಾಡಿ ಸೀತಾರಾಮ ಶೆಟ್ಟಿ ಇವರ ಸ್ಮರಣಾರ್ಥ ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ‘ಮಿನುಗೆಲೆ ಮಿನುಗೆಲೆ ನಕ್ಷತ್ರ’ ನಾಟಕ ಪ್ರದರ್ಶನವನ್ನು ದಿನಾಂಕ 02 ಮೇ 2026ರಂದು ಸಂಜೆ 7-00 ಗಂಟೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಶಶಿರಾಜ್ ಕಾವೂರು ರಚಿಸಿರುವ ಈ ನಾಟಕದ ನಿರ್ದೇಶನವನ್ನು ಬಿ. ಗಣೇಶ್ ಕಾರಂತ್ ಮತ್ತು ರೋಶನ್ ಕುಮಾರ್ ಮಾಡಿರುತ್ತಾರೆ.

