ಮೈಸೂರು : ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜು, ಜಯಲಕ್ಷ್ಮಿ ಪುರಂ (ಸ್ವಾಯತ್ತ) ಸಾಂಸ್ಕೃತಿಕ ರಂಗ ತಂಡ (ಸಾರಂತ) ಅಭಿನಯಿಸುವ ‘ಊರ ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನವನ್ನು ದಿನಾಂಕ 23 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕದ ರಚನೆ ಹನುಮಂತ ಹಾಲಿಗೇರಿ, ಸಂಗೀತ ಚಿಂತನ್ ವಿಕಾಸ್ ಜೆ. ಮತ್ತು ಜನಾರ್ದನ್ ಹೆಚ್. ಇವರದ್ದು, ಬೆಳಕು ಮಧು ಮಳವಳ್ಳಿ ಹಾಗೂ ಕೆ.ಆರ್. ಸುಮತಿ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.


