‘ದಲಿಯನ ಡೋಲು’ ನಾಟಕವು ಪ್ರಸಿದ್ಧ ರಚಯಿತೃ ಉದಯ ಸಾರಂಗ್ ಅವರ ಅದ್ಭುತ ಕೃತಿ. ಈ ನಾಟಕವು ಸಮಾಜದ ಅಂತರಾಳದಲ್ಲಿರುವ ನೋವು, ಅನ್ಯಾಯ ಮತ್ತು ಹೋರಾಟದ ಭಾವನೆಗಳನ್ನು ಬಹಳ ಪ್ರಭಾವಶಾಲಿಯಾಗಿ ಮೂಡಿಸುತ್ತದೆ. ಉದಯ ಸಾರಂಗ್ ಅವರ ಅದ್ಭುತ ನಿರ್ದೇಶನ ಮತ್ತು ಶಕ್ತಿಶಾಲಿ ಸಂಭಾಷಣೆಗಳು ನಾಟಕಕ್ಕೆ ವಿಶಿಷ್ಟ ಜೀವ ತುಂಬುತ್ತವೆ. ಪ್ರತಿ ದೃಶ್ಯವೂ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುವಂತೆ ರೂಪಿಸಲಾಗಿದೆ. ಸಂಭಾಷಣೆಗಳು ಸರಳವಾಗಿದ್ದರೂ ಗಾಢವಾದ ಅರ್ಥವನ್ನು ಹೊತ್ತುಕೊಂಡಿವೆ.

‘ದಲಿಯನ ಡೋಲು’ ಎಂಬ ಶೀರ್ಷಿಕೆ ಸ್ವತಃ ಒಂದು ಸಂಕೇತ. ಇದು ನೆಲ ಮೂಲದ ಬದುಕಿನ ನೋವು, ಅವರ ಹೋರಾಟ ಮತ್ತು ಗೌರವಕ್ಕಾಗಿ ನಡೆಯುವ ಪಯಣವನ್ನು ಪ್ರತಿಬಿಂಬಿಸುತ್ತದೆ. ನಾಟಕದಲ್ಲಿ ಡೋಲು ಒಂದು ಪ್ರತೀಕವಾಗಿ ಕಾಣಿಸುತ್ತದೆ. ಅದು ಧ್ವನಿ ಇಲ್ಲದವರ ಮಾರ್ಧನಿ, ಈ ಮಣ್ಣಿನ ಸಂಸ್ಕಾರಕ್ಕೆ ದಕ್ಕೆ ಬರುವಾಗ ಆಗುವ ಘೋಷಣೆ.

ನಾಟಕದ ಕಥಾವಸ್ತು ಪ್ರಕೃತಿಯೇ ದೇವರು ಎಂದು ಪೂಜಿಸುವ ‘ದಲಿಯ’ನೆಂಬ ಕಥಾ ಪಾತ್ರ ಬಹುರಾಷ್ಟ್ರೀಯ ಕಂಪೆನಿಗಳು ತನ್ನ ನೆಲವನ್ನು ಕಸಿದುಕೊಳ್ಳುವಾಗ ವಿದೇಶಿ ಸಂಸ್ಕೃತಿಯ ಹಾವಳಿಯಲ್ಲಿ ತನ್ನ ನೆಲದ ಮೂಲದ ಬಗ್ಗೆ ಬಡಿಯುವ ದಲಿಯನ ಡೋಲಿನ ಸುತ್ತ ಕಥೆ ತಿರುಗುತ್ತದೆ. ‘ಮಾಯಾವಿ’ ಎಂಬ ಕಥಾ ಪಾತ್ರ ನೋಡುಗರನ್ನು ತುದಿಕಾಲಲ್ಲಿ ನಿಲ್ಲಿಸುತ್ತದೆ. ಊರಿನ ಜಮೀನ್ದಾರಿ ಅಮ್ಮಾವ್ರು ಪಾತ್ರವೂ ಹಾಸ್ಯದ ಹೊನಲಿನೊಂದಿಗೆ ನಾಟಕದ ಅಂತಿಮ ದೃಶ್ಯದಲ್ಲಿ ಗಂಭೀರವಾಗುವುದೇ ನೋಡಲು ಆಕರ್ಷಕ. ಕೆಲಸದಾಳು ಮಂಜ ಊರಿನ ಜನರು ಕಥಾ ಪಾತ್ರಗಳು ನಮ್ಮೊಳಗಿನ ಭಾವವಾಗಿ ನೆಲೆ ನಿಲ್ಲುತ್ತದೆ.


ಅನ್ಯಾಯವನ್ನು ಪ್ರಶ್ನಿಸಲು ಜೊತೆಗೆ ಯಾರು ಇಲ್ಲದಿರುವಾಗ ತಾನು ನಂಬಿದ ದೈವದಲ್ಲಿ ದಲಿಯ ತನ್ನ ಅಳಲನ್ನು ಹೇಳುವ ಮುಗ್ದತೆ ಮನ ಮಿಡಿಯುತ್ತದೆ. ನಾಟಕದ ಕ್ಲೇಮೇಕ್ಸ್ ಅಂತೂ ಯಾರು ಊಹಿಸದ ರೀತಿಯ ರಂಗಾವಿಷ್ಕಾರ ನೋಡುಗರ ಮನಸ್ಸಿನಲ್ಲಿ ಶಾಶ್ವತ ನೆಲೆಯಾಗುತ್ತದೆ. ಪಾತ್ರಗಳ ಅಭಿನಯ, ಸಂಭಾಷಣೆಗಳ ತೀಕ್ಷ್ಣತೆ ಮತ್ತು ನಿರ್ದೇಶನದ ಗಾಢತೆ—all together—ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುತ್ತವೆ. ಒಟ್ಟಾರೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನವಾದ ಉದಯ ಸಾರಂಗ್ ಅವರ ‘ದಲಿಯನ ಡೋಲು’ ನಾಟಕವು ಸಾಮಾಜಿಕ ಸಂದೇಶವನ್ನು ಹೊತ್ತ ಶಕ್ತಿಯುತ ಕಲಾಕೃತಿ. ಮನಮುಟ್ಟುವ ಕಥನಶೈಲಿ ಈ ನಾಟಕವನ್ನು ಮತ್ತಷ್ಟು ವಿಶಿಷ್ಟವಾಗಿಸುತ್ತದೆ. ಕವಿ ಶ್ರೀನಿವಾಸ ಪೆರಿಕ್ಕಾನರವರ ನೇತೃತ್ವದ ಭೂಮಿಕಾ ಸಂಡೇ ಥಿಯೇಟರ್ ಸ್ವರ್ಗ ಕಾಸರಗೋಡು ತಂಡ ರಂಗಭೂಮಿಯಲ್ಲಿ ಹೊಸ ಭರವಸೆ ಮೂಡಿಸುತ್ತಿದೆ.
ವಿಮರ್ಶಕರು : ಸಂಜೀವ ಸಿ.ಯಚ್., ಅಧ್ಯಾಪಕರು ಜಿ.ಎಚ್.ಎಸ್.ಎಸ್. ಪೈವಳಿಕೆ ನಗರ

ರಚನೆ ಮತ್ತು ನಿರ್ದೇಶನ : ಉದಯ ಸಾರಂಗ್
