ಬೆಂಗಳೂರು: ದ್ರಾವಿಡ ಭಾಷಾ ಅನುವಾದಕರ ಸಂಘ ನೀಡುವ ಪ್ರಶಸ್ತಿಗೆ ಈ ಬಾರಿ ಅನುವಾದಕಿ ಗೌರಿ ಕಿರುಬನಂದನ್ ಆಯ್ಕೆಯಾಗಿದ್ದಾರೆ. ದ್ರಾವಿಡ ಭಾಷಾ ಅನುವಾದಕರ ಸಂಘ (ಡಿ. ಬಿ. ಟಿ. ಎ.) ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದೆ.
ಗೌರಿ ಕಿರುಬನಂದನ್ ಅವರು ತೆಲುಗು ಭಾಷೆಯ ‘ಇರು ಕೋಡುಗಳ್’ ಕೃತಿಯನ್ನು ತಮಿಳು ಭಾಷೆಗೆ ಅನುವಾದ ಮಾಡಿದ್ದರು. ಈ ಕೃತಿಗೆ ಡಿ. ಬಿ. ಟಿ. ಎ. -2024ರ ಪ್ರಶಸ್ತಿ ಸಂದಿದೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಪಾರ್ವತಿ ಐತಾಳ್, ಕೆ. ಕೆ. ರಂಗಾಧರನ್ ಹಾಗೂ ಕೆ. ಪ್ರಭಾಕರನ್ ಇದ್ದರು. ಪ್ರಶಸ್ತಿ 11,111 ನಗದು ಹಾಗೂ ಪಾರಿತೋಷಕ ಹೊಂದಿದೆ. ದಿನಾಂಕ 26 ಸೆಪ್ಟೆಂಬರ್ 2024ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ನಾಡೋಜ ಹಂಪನಾಗರಾಜಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಂಗಕಲಾವಿದೆ ಲಕ್ಷ್ಮೀಚಂದ್ರಶೇಖರ್ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಿ. ಬಿ. ಟಿ. ಎ. ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಯುವ ಲೇಖಕಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಇವರ ಭಾರತ್ @2047ರ ಯುವ ಪಾತ್ರದ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ
Next Article ಬೆಳ್ತಂಗಡಿಯಲ್ಲಿ ತುಳು ಸಾಹಿತ್ಯ ರಚನಾ ಕಮ್ಮಟ
Related Posts
Comments are closed.