ಪೆರಿಯ : ಗಡಿನಾಡು ಕಾಸರಗೋಡಿನ ಬೇಕಲದ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಪೀಠದಲ್ಲಿ ಮೇ ತಿಂಗಳ ಪೂರ್ವಾರ್ಧದಲ್ಲಿ ನಡೆಯ ರಾಷ್ಟ್ರೀಯ ನೃತ್ಯೋತ್ಸವ ‘ವೈಶಾಖ ನಟನಂ’ನಲ್ಲಿ ದಿನಾಂಕ 11 ಮೇ 2026ರಂದು ಸಂಜೆ ಪುತ್ತೂರಿನ ಪ್ರಖ್ಯಾತ ಭರತನಾಟ್ಯ ದಂಪತಿ ‘ಕಲಾದೀಪ’ ಖ್ಯಾತಿಯ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾರವರು ಯುಗಳ ನೃತ್ಯ ಕಾರ್ಯಕ್ರಮ ನೀಡಿದರು.

ಸಂಪೂರ್ಣ ರಾಮಾಯಣ ಕಥಾ ಹಂದರವುಳ್ಳ ಕೃತಿ ಸ್ವಾತಿ ತಿರುನಾಳ್ ಮಹಾರಾಜರು ರಚಿಸಿದ ‘ಭಾವಯಾಮಿ ರಘುರಾಮಂ’ ನೃತ್ಯವನ್ನು ಸುಮಾರು ಒಂದು ಗಂಟೆಯ ಕಾಲ ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಈ ಕಾರ್ಯಕ್ರಮವು ಗೋಶಾಲೆಯ ಧೇನು ಮಂಟಪದಲ್ಲಿ ನಡೆಯಿತು. ನೃತ್ಯ ದಂಪತಿಗಳನ್ನು ವಿದ್ಯಾಪೀಠದ ಮುಖ್ಯಸ್ಥರಾದ ಶ್ರೀ ವಿಷ್ಣು ಹೆಬ್ಬಾರ್ ರವರು ಕಾರ್ಯಕ್ರಮದ ನಂತರ ಗೌರವಿಸಿದರು.

