ಬೆಂಗಳೂರು : ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ 2025ನೇ ಸಾಲಿನ ‘ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 14ನೇ ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಶೇಷಾದ್ರಿಪುರದಲ್ಲಿರುವ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣ ದತ್ತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವನ್ನು ಹಿರಿಯ ವಿಮರ್ಶಕರಾದ ಡಾ. ಎಚ್.ಎಸ್. ರಾಘವೇಂದ್ರ ರಾವ್ ಇವರು ಉದ್ಘಾಟನೆ ಮಾಡಲಿದ್ದು, ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಎಲ್.ಎನ್. ಮುಕುಂದ ರಾಜ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಂ. ಹನೀಫ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕಾದಂಬರಿಕಾರರಾದ ದ್ವಾರನಕುಂಟೆ ಪಾತಣ್ಣ ಇವರ ಉಪಸ್ಥಿತಿಯಲ್ಲಿ ಲೇಖಕ ಶಶಿಧರ ಹಾಲಾಡಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

