ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಕೂಟ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 07 ಮಾರ್ಚ್ 2026ರಂದು ಪ್ರಾರ್ಥಿಸುಬ್ಬ ವಿರಚಿತ ‘ಅಂಗದ ಸಂಧಾನ’ ತಾಳಮದ್ದಲೆಯೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ನರಸಿಂಹ ಶಾಸ್ತ್ರಿ ಮರಿಲು, ಶಿವಪ್ರಸಾದ್ ನಾಕೂರು, ಮುರಳಿಧರ ಕಲ್ಲೂರಾಯ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಶೆಟ್ಟಿ ಸಾಲ್ಮರ ಮತ್ತು ಭಾಸ್ಕರ್ ಬಾರ್ಯ (ಅಂಗದ), ಗುಡಪ್ಪ ಬಲ್ಯ (ಪ್ರಹಸ್ತ), ಮಾಂಬಾಡಿ ವೇಣುಗೋಪಾಲ್ ಭಟ್ (ಶ್ರೀ ರಾಮ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಶ್ರೀ ಗುಡ್ಡಪ್ಪ ಬಲ್ಯ ಪ್ರಾಯೋಜಿಸಿದ್ದರು.
