ಮಂಗಳೂರು : ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಲೆ ಅಷ್ಟಾಹ ಸಂಭ್ರಮ ‘ಯಕ್ಷಮಂಜರಿ’ಯ ಚತುರ್ಥ ದಿನದ ಕಾರ್ಯಕ್ರಮವು ದಿನಾಂಕ 04 ಮಾರ್ಚ್ 2026ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿದ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ಧಾರ್ಮಿಕ ಮುಂದಾಳು, ಹಿರಿಯರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಮಾತನಾಡಿ “ನಮ್ಮ ಭಾರತೀಯ ಸನಾತನ ಸಂಸ್ಕೃತಿ ಉಳಿಯಬೇಕಾದರೆ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆ ಮೂಡಬೇಕು. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಆ ಕುರಿತಾದ ಚಿಂತನೆಗೆ ಅವಕಾಶ ಇಲ್ಲದಿರುವುದರಿಂದ, ಮಕ್ಕಳು ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜಾಗೃತಿ ಸಾಧ್ಯ” ಎಂದು ನುಡಿದರು.

ಉದ್ಯಮಿ ಮಹಾಬಲ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಮಂಜರಿ ಅಷ್ಟಾಹ ಕಾರ್ಯಕ್ರಮದ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಶ್ರೀ ಯೋಗೀಶ ದೇವಾಡಿಗ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಚಂಚಲ ತೇಜೋಮಯ, ಶ್ರೀ ಹರಿ ನಾರಾಯಣ ಬೈಪಡಿತ್ತಾಯ, ಶ್ರೀ ದೇವೇಂದ್ರ ಶೆಟ್ಟಿಗಾರ, ಶ್ರೀಮತಿ ಕಿರಣ ಮಹೇಶ ದೇವಾಡಿಗ, ಯಕ್ಷ ಸಿಂಧೂರ ಮಹಿಳಾ ಯಕ್ಷಗಾನ ಕೂಟ ತಲಪಾಡಿ ಇದರ ಸಂಚಾಲಕಿ ಶ್ರೀಮತಿ ರಾಧಾ ಹೊಳ್ಳ, ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷೆ ಗೀತಾ ಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ ಪಾಟಾಳಿ, ಅರುಣ್ ಕುಮಾರ್, ಗಣೇಶ ಬಿ.ಜಿ., ಯೋಗೀಶ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ, ಆಧ್ಯಾ, ಲಕ್ಷ್ಯಾ, ಕೃತಿ, ಹೃತ್ವಿ, ಲಕ್ಷಾ, ವೃಷಭೇಂದ್ರ ಇವರೊಂದಿಗೆ ನೂರಾರು ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ತಲಪಾಡಿಯ ಯಕ್ಷಸಿಂಧೂರ ಮಹಿಳಾ ಯಕ್ಷಗಾನ ಕೂಟ ಇದರ ಮಹಿಳಾ ಕಲಾವಿದರಿಂದ ‘ಭಕ್ತ ಸುಧನ್ವ’ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

