Subscribe to Updates

    Get the latest creative news from FooBar about art, design and business.

    What's Hot

    ಕವಿ ಮಿತ್ರರು ಸಂಪದ ಸಾಲು ಪತ್ರಿಕೆ ವತಿಯಿಂದ ‘ಕವಿ ಗೋಷ್ಠಿ’ ಕಾರ್ಯಕ್ರಮ | ಜನವರಿ 18

    January 15, 2026

    ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದ ‘ಕಥಾಬಿಂದು ಪ್ರಕಾಶನ’

    January 15, 2026

    ಬೆಂಗಳೂರಿನಲ್ಲಿ ಕರ್ನಾಟಕ ಗಜಲ್ ಅಕಾಡೆಮಿಯಿಂದ ‘ಕನ್ನಡ ಗಜಲ್ ಕಮ್ಮಟ’ | ಜನವರಿ 18  

    January 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೊಡವ ಮಕ್ಕಡ ಕೂಟದ 106ನೇ ಮತ್ತು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ 11ನೇ ಪುಸ್ತಕ “ಗಮ್ಯ” ಲೋಕಾರ್ಪಣೆ 
    Book Release

    ಕೊಡವ ಮಕ್ಕಡ ಕೂಟದ 106ನೇ ಮತ್ತು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ 11ನೇ ಪುಸ್ತಕ “ಗಮ್ಯ” ಲೋಕಾರ್ಪಣೆ 

    December 25, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಡಿಕೇರಿ : ಕೂಡವ ಮಕ್ಕಡ ಕೂಟದ 106ನೇ ಮತ್ತು ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ 11ನೇ ಪುಸ್ತಕ “ಗಮ್ಯ” ಇದರ ಲೋಕರ್ಪಣಾ ಸಮಾರಂಭವು ದಿನಾಂಕ 23 ಡಿಸೆಂಬರ್ 2024ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಮಾತನಾಡಿ “ಸಮಾಜದ ಸುಧಾರಣೆಯಲ್ಲಿ ಪುಸ್ತಕಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪುಸ್ತಕಗಳು ಸಾಮಾಜಿಕ ಕಾಳಜಿಯೊಂದಿಗೆ ಉತ್ತಮ ಸಂದೇಶವನ್ನು ನೀಡಬೇಕು, ಲೋಕಾರ್ಪಣೆಗೊಳ್ಳುವ ಪುಸ್ತಕಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ಅರ್ಜಿ ಹಾಕಿ ಯಾವುದೇ ಜಾತಿಯಲ್ಲಿ ಹುಟ್ಟಲು ಸಾಧ್ಯವಿಲ್ಲ, ಹುಟ್ಟಿದ ಮೇಲೆ ಜಾತಿಯ ಬಗ್ಗೆ ಸ್ವಾಭಿಮಾನ ಮತ್ತು ಅಭಿಮಾನವಿರಬೇಕು. ಹುಟ್ಟಿದ ಮಣ್ಣಿನ ಮೇಲೆ ಪ್ರೀತಿ ಇರಬೇಕು. ಕೊಡವರಾಗಿ ಹುಟ್ಟಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಕೊಡಗಿನ ನೆಲ, ಜಲ ಹಾಗೂ ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರ ಸಿನಿಮಾಗಳಲ್ಲಿ ಇದನ್ನು ಕಾಣಬಹುದಾಗಿದೆ. ಸಿನಿಮಾ ಕ್ಷೇತ್ರದೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ.” ಎಂದರು.
    ಹಿರಿಯ ಸಾಹಿತಿ ಬಾಚರಣೆಯಂಡ ಪಿ.ಅಪ್ಪಣ್ಣ ಮಾತನಾಡಿ “ಸಾಹಿತ್ಯದ ಮೂಲಕ ಕನ್ನಡ ನಾಡು, ನುಡಿಯನ್ನು ಶ್ರೀಮಂತಗೊಳಿಸಬೇಕು. ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಓದುಗರ ಸಂಖ್ಯೆ ಕಡಿಮೆ ಇದೆ. ಓದುಗರನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು. ‘ಗಮ್ಯ’ ಪುಸ್ತಕ ಹೃದಯವನ್ನು ಮುಟ್ಟುತ್ತದೆ.  ಇದರಲ್ಲಿರುವ ಕನ್ನಡ ಪದ ಬಳಕೆ ಚಾಕಲೇಟ್ ನಷ್ಟು ಸಿಹಿಯಾಗಿದೆ. ಈ ಸಿಹಿಯನ್ನು ಸವಿಯಲು ಪ್ರತಿಯೊಬ್ಬರು ಒಂದು ಪುಸ್ತಕವನ್ನು ಕೊಂಡು ಓದಬೇಕು. ಸಾಹಿತ್ಯಯಾಗ ಮಾಡುತ್ತಿರುವ ಕೊಡವ ಮಕ್ಕಡ ಕೂಟ 106 ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ದೊಡ್ಡ ಸಾಧನೆಯನ್ನೇ ಮಾಡಿದೆ. ಬರಹಗಾರರಿಗೆ ಪ್ರೋತ್ಸಾಹ ನೀಡಿದಂತೆ ಓದುಗರನ್ನು ಆಕರ್ಷಿಸಲು ಏನಾದರೂ ಉಪಾಯ ಮಾಡಲೇಬೇಕು.” ಎಂದರು.
    ಫೀ. ಮಾ. ಕೆ. ಎಂ. ಕಾರ್ಯಪ್ಪ ಕಾಲೇಜ್ ಇದರ ಪ್ರಾಂಶುಪಾಲ ಪ್ರೊ. ಮೇಜರ್ ಬಿ. ರಾಘವ ಮಾತನಾಡಿ “ಅತಿಯಾದ ನಾಗರೀಕತೆ ಮತ್ತು ಆಧುನಿಕತೆಯ ನಡುವೆ ಮಾನವೀಯತೆಗೆ ಬೆಲೆ ಇಲ್ಲದಾಗಿದೆ. ಸಾಮಾಜಿಕ ಕಳಕಳಿಯ ಅಂಶಗಳಿಂದ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯಾಗಬೇಕಾಗಿದೆ. ಸಾಹಿತಿಗಳು ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ನಾಹಿತ್ಯ ಸೇವೆಯ ಮೂಲಕ ಜನರಿಗೆ ಭೌಗೋಳಿಕ ಜ್ಞಾನವನ್ನು ನೀಡುತ್ತಾರೆ. ಕೊಡವ ಮಕ್ಕಡ ಕೂಟ ಬರವಣಿಗೆಯ ಕ್ರಾಂತಿಯನ್ನೇ ಮಾಡುತ್ತಿದ್ದು, ಕೂಟಕ್ಕೂ ಪ್ರೋತ್ಸಾಹದ ಅಗತ್ಯವಿದೆ.” ಎಂದು ಹೇಳಿದರು.
    ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಇದರ ನಿವೃತ್ತ ಪಾಂಶುಪಾಲರಾದ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ ಮಾತನಾಡಿ “ಸಮಾಜದಲ್ಲಿ ಮಹಿಳಾ ಪೋಷಣೆ ಇನ್ನೂ ಕೂಡ ಜೀವಂತವಾಗಿರುವುದು ಬೇಸರದ ವಿಚಾರವಾಗಿದೆ. ಸರಕಾರ ಯಾವುದೇ ಯೋಜನೆ ಅಥವಾ ಕಠಿಣ ಕಾನೂನು ಜಾರಿಗೆ ತಂದರೂ ಬಾಲಕಿಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ವಿಷಾದನೀಯ. ಹೆಣ್ಣಿನಿಂದ ಹೆಣ್ಣಿನ ಮೇಲೆಯೇ ದೌರ್ಜನ್ಯ ಹೆಚ್ಚಾಗುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀಶೋಷಣೆಯನ್ನು ಕೊನೆಗಾಣಿಸಬೇಕಾಗಿದೆ. ‘ಗಮ್ಯ’ ಪುಸ್ತಕ ಹೃದಯಸ್ಪರ್ಶಿಯಾಗಿದ್ದು, ಮಹಿಳೆಯರ ಬದುಕಿನ ಕುರಿತು ಮನಮುಟ್ಟುವಂತೆ ಬರೆಯಲಾಗಿದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ‘ಗಮ್ಯ’ ಪುಸ್ತಕದ ರಚನೆಕಾರ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ “ಸಾಹಿತ್ಯ ರಚನೆ ಜವಾಬ್ದಾರಿಯುತವಾಗಿರಬೇಕು, ಓದುಗರನ್ನು ಸೆಳೆಯುವ ಮತ್ತು ಸಮಾಜವನ್ನು ಪರಿವರ್ತಿಸುವ ಶಕ್ತಿ ಅದರಲ್ಲಿರಬೇಕು. ಸಿನಿಮಾ ನಾಹಿತ್ಯ ಹಾಗೂ ಪುಸ್ತಕಗಳ ರಚನೆ ಅತ್ಯಂತ ಹಿಡಿತದಿಂದ ಕೂಡಿದ್ದರೆ ಜನಪ್ರಿಯತೆ ಪಡೆಯಲು ಸಾಧ್ಯ.” ಎಂದು ಅಭಿಪ್ರಾಯಪಟ್ಟರು.
    ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಹಾಗೂ ಪ್ರಕಾಶಕ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ “ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 105 ಪುಸ್ತಕಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಈಗಾಗಲೇ ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ಅದ್ದೂರಿಯಾಗಿ ಸಮರ್ಪಿಸಲಾಗಿದ್ದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.” ಎಂದು ತಿಳಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವ್ಯಕ್ತಿ ಪರಿಚಯ | ಲಯನ್ ಎಂ.ಜೆ.ಎಫ್. ಕದ್ರಿ ನವನೀತ ಶೆಟ್ಟಿ
    Next Article ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿಗೆ 25ನೇ ವರ್ಷಾಚರಣೆ ಸಂಭ್ರಮ
    roovari

    Add Comment Cancel Reply


    Related Posts

    ಕವಿ ಮಿತ್ರರು ಸಂಪದ ಸಾಲು ಪತ್ರಿಕೆ ವತಿಯಿಂದ ‘ಕವಿ ಗೋಷ್ಠಿ’ ಕಾರ್ಯಕ್ರಮ | ಜನವರಿ 18

    January 15, 2026

    ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದ ‘ಕಥಾಬಿಂದು ಪ್ರಕಾಶನ’

    January 15, 2026

    ಬೆಂಗಳೂರಿನಲ್ಲಿ ಕರ್ನಾಟಕ ಗಜಲ್ ಅಕಾಡೆಮಿಯಿಂದ ‘ಕನ್ನಡ ಗಜಲ್ ಕಮ್ಮಟ’ | ಜನವರಿ 18  

    January 15, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಎಷ್ಟೊಂದು ನಾವೆಗಳು’

    January 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.