Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಸಾಹಿತ್ಯ ವೈಭವ 2026’ | ಜನವರಿ 25

    January 23, 2026

    ವಿಜಯಪುರ ಜಿಲ್ಲಾ ಸಮಿತಿಯಿಂದ ಗಮಕ ವಾಚನ ಮತ್ತು ವ್ಯಾಖ್ಯಾನ

    January 23, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’ ಕಥಾ ಸಂಕಲನ

    January 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯಲ್ಲಿ ‘ಗೋವಿಂದ ಪೈ ಸಂಶೋಧನ ಸಂಪುಟ 1’ ಅನಾವರಣ ಸಮಾರಂಭ | ನವೆಂಬರ್ 16
    Book Release

    ಉಡುಪಿಯಲ್ಲಿ ‘ಗೋವಿಂದ ಪೈ ಸಂಶೋಧನ ಸಂಪುಟ 1’ ಅನಾವರಣ ಸಮಾರಂಭ | ನವೆಂಬರ್ 16

    November 14, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಮಣಿಪಾಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಸಹಯೋಗದಲ್ಲಿ ‘ಗೋವಿಂದ ಪೈ ಸಂಶೋಧನ ಸಂಪುಟ 1’ ಅನಾವರಣ ಸಮಾರಂಭವನ್ನು ದಿನಾಂಕ 16 ನವೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿ ಕುಂಜಿಬೆಟ್ಟು ಎಂ.ಜಿ.ಎಂ. ಕಾಲೇಜು ಆವರಣ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

    ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಲಹಾ ಸಮಿತಿಯ ಪ್ರಧಾನ ಸಂಪಾದಕರು ಹಾಗೂ ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಗ್ರಂಥ ಅನಾವರಣ ಮಾಡಲಿರುವರು. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎನ್.ಎಸ್. ತಾರಾನಾಥ ಇವರು ಸಂಪುಟದ ಕುರಿತು ಮಾತನಾಡಲಿದ್ದಾರೆ.

    ಕಾವ್ಯ, ನಾಟಕ ರಚನೆ, ವಿಮರ್ಶೆ ಹೀಗೆ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದ ಕರ್ನಾಟಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಈ ನಾಡು ಕಂಡ ಅತ್ಯಂತ ಶ್ರೇಷ್ಠ ಸಂಶೋಧಕರು. ಶಬ್ದ, ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿಯ ಮೇಲೆ ಅವರು ಹೇರಳವಾಗಿ ಅಧ್ಯಯನ ನಡೆಸಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವು ಭಾಷೆಗಳನ್ನು ಬಲ್ಲವರಾಗಿದ್ದ ಗೋವಿಂದ ಪೈಗಳು ಸಂಶೋಧನೆಗೆ ಅಂತರ್‌ಶಿಸ್ತೀಯ ಆಯಾಮವನ್ನು ಕೊಟ್ಟವರಾಗಿದ್ದರು. ಅಂದು ದೊರಕಿದ ಸುಮಾರು ಸಾವಿರಕ್ಕೂ ಮಿಕ್ಕಿದ ಅವರ ಸಂಶೋಧನ ಲೇಖನಗಳನ್ನು ಸಂಗ್ರಹಿಸಿ 1995ರಲ್ಲಿ ಪ್ರೊ. ಹೆರಂಜೆ ಕೃಷ್ಣ ಭಟ್ ಹಾಗೂ ಪ್ರೊ. ಮುರಳೀಧರ ಉಪಾಧ್ಯ ಅವರ ಸಂಪಾದಕತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ 1400 ಪಟಗಳ ಸಮಗ್ರ ಗೋವಿಂದ ಪೈ ಸಂಶೋಧನ ಸಂಪುಟವನ್ನು ಪ್ರಕಟಿಸಿತ್ತು. ಇಂದಿಗೂ ಹಾಗೂ ಮುಂದಿನ ಸಂಶೋಧನೆಗಳಿಗೂ ದಾರಿದೀಪದಂತಿರುವ ಈ ಕೃತಿಯಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮಾತ್ರವಲ್ಲ ಕರ್ನಾಟಕ ಹಾಗೂ ಭಾರತದ ಚರಿತ್ರೆ ಹಾಗೂ ತುಳುನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಹಲವಾರು ಲೇಖನಗಳಿವೆ. ಬಹುಬೇಡಿಕೆಯ ಈ ಕೃತಿ ಇಂದು ಮತ್ತೆ ಮರುಮುದ್ರಣವನ್ನು ಕಾಣುತ್ತಿದೆ. ಮತ್ತೆ ಸಿಕ್ಕಿದ ಒಂದಷ್ಟು ಲೇಖನಗಳು ಮರುಮುದ್ರಿತ ಕೃತಿಯಲ್ಲಿ ಜಾಗ ಪಡೆದಿವೆ. ಅಂದಿನ ಸಮಗ್ರ ಸಂಪುಟವನ್ನು ಇದೀಗ ಎರಡು ಸಂಪುಟಗಳಾಗಿ ಮಾಡಿಕೊಳ್ಳಲಾಗಿದ್ದು, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ಸಹಾಯದಿಂದ ಮರುಮುದ್ರಿತ ಸಂಪುಟಗಳ ಪ್ರಕಟನ ಸಲಹಾ ಮಂಡಳಿಯ ಅಧ್ಯಕ್ಷ ಹಾಗೂ ಗೌರವ ಸಂಪಾದಕ ಪ್ರೊ. ಬಿ.ಎ. ವಿವೇಕ ರೈಯವರಾಗಿದ್ದು, ಪ್ರೊ. ಮುರಳೀಧರ ಉಪಾಧ್ಯ ಹಾಗೂ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರ ಸಂಪಾದಕತ್ವದಲ್ಲಿ ದ್ವಿತೀಯ ಆವೃತ್ತಿಯ ಮೊದಲ ಸಂಪುಟ ಬಿಡುಗಡೆಗೆ ಇದೀಗ ಸಿದ್ಧವಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ. ಶೆಟ್ಟಿಯವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ
    Next Article ಕ.ಸಾ.ಪ. ಸಾಹಿತ್ಯ ಸಂಭ್ರಮ ಸಮಾರೋಪ ಮತ್ತು ಸನ್ಮಾನ ಸಮಾರಂಭ
    roovari

    Add Comment Cancel Reply


    Related Posts

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಸಾಹಿತ್ಯ ವೈಭವ 2026’ | ಜನವರಿ 25

    January 23, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’ ಕಥಾ ಸಂಕಲನ

    January 23, 2026

    ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ‘ಜನ ಗಣ ಮನ’ | ಜನವರಿ 24

    January 23, 2026

    ಸಂದೇಶ ಸಂಸ್ಥೆಯ ಆವರಣದಲ್ಲಿ 35ನೇ ವರ್ಷದ ‘ಸಂದೇಶ ಪ್ರಶಸ್ತಿ’ ಪ್ರದಾನ

    January 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.