Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ದೇವಳದ ರಾಜಾಂಗಣದಲ್ಲಿ ತುಳು ಬರಹಗಳ ಗುಚ್ಚ ‘ಕಡ್ಲೆ ಬಜಿಲ್’ ಲೋಕಾರ್ಪಣೆ

    January 22, 2026

    ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ‘ದ ದಾಪರ್ ಎಕ್ಸ್ಪೋ’

    January 22, 2026

    ‘ಕಥಾಬಿಂದು ಸಾಹಿತ್ಯ ಸಂಭ್ರಮ’ದಲ್ಲಿ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ

    January 22, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಬೆಸೆಂಟ್ ಮಂದಿರದಲ್ಲಿ ‘ಗುರು ಪೂಣಿ೯ಮಾ’
    Literature

    ಮಂಗಳೂರಿನ ಬೆಸೆಂಟ್ ಮಂದಿರದಲ್ಲಿ ‘ಗುರು ಪೂಣಿ೯ಮಾ’

    July 18, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಮತ್ತು ಥಿಯೊಸೊಫಿಕಲ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ ಗುರು ಪೂಣಿ೯ಮಾ (ವ್ಯಾಸ ಜಯಂತಿ) ಕಾಯ೯ಕ್ರಮವು ದಿನಾಂಕ 14 ಜುಲೈ 2025ರಂದು ಮಂಗಳೂರಿನ ಬೆಸೆಂಟ್ ಮಂದಿರ(ಥಿಯೊಸೊಫಿಕಲ್ ಸೊಸೈಟಿ) ಇಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡಿ ವ್ಯಾಸ ಭಾರತ ಗ್ರಂಥಕ್ಕೆ ಆರತಿ ಬೆಳಗಿದ ಅ. ಭಾ. ಸಾ. ಪ. ಮಂಗಳೂರು ತಾಲೂಕು ಉಪಾಧ್ಯಕ್ಷ ಹಾಗೂ ಥಿಯೊಸೊಫಿಕಲ್ ಸೊಸೈಟಿ ಅಧ್ಯಕ್ಷರಾದ ವಿದ್ವಾನ್ ಶ್ರೀ ತುಪ್ಪೇಕಲ್ಲು ನರಸಿಂಹ ಶೆಟ್ಟಿ ಮಾತನಾಡಿ “ಗುರು ಎಂಬ ಶಬ್ದವೇ ಅಂಧಕಾರವನ್ನು ಹೊಡೆದೋಡಿಸಿ, ಸುಜ್ಞಾನದ ಸುಗಂಧವನ್ನು ಎಲ್ಲೆಡೆ ಪಸರಿಸುವುದು ಎಂದಥ೯. ವೇದವ್ಯಾಸರು 4 ವೇದಗಳನ್ನು ವಿಂಗಡಿಸಿ ತಮ್ಮ ಶಿಷ್ಯರ ಕೈಯಲಿಟ್ಟು ಜ್ಞಾನವನ್ನು ಎಲ್ಲರಿಗೂ ಉಣಬಡಿಸಿದ ಮಹಾನ್ ಮುನಿಗಳು”. ಎಂದು ವೇದವ್ಯಾಸರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟರು.
    ಅ. ಭಾ. ಸಾ. ಪ ದ. ಕ ಜಿಲ್ಲೆಯ ಅದ್ಯಕ್ಷರಾದ ಶ್ರೀ ಹರೀಶ್ ಪಿ. ಬಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವಾನ್ ಶ್ರೀ ಕೇಶವ ಭಟ್ ಅವರು ಮೋಕ್ಷ ಸಂಪಾದನೆಗಾಗಿ ದೇಹ ಮತ್ತು ಮನಸ್ಸನ್ನು ಹೇಗೆ ಶುದ್ಧಿಗೊಳಿಸಿ ಸಜ್ಜಾಗಿಸಬೇಕು ಎಂಬುವುದರ ಬಗ್ಗೆ ಬಹಳ ಸರಳವಾಗಿ ತಿಳಿಸಿದರು.
    ಮೊದಲಿಗೆ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡ ಕಾಯ೯ಕ್ರಮದಲ್ಲಿ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಶ್ರೀಮತಿ ಯಶೋದಾ ಕುಮಾರಿ ನಿರೂಪಣೆಗೈದು, ಶ್ರೀಮತಿ ಶೈಲಜಾ ಪುದುಕೋಳಿ ವಂದಿಸಿದರು.

     

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷದೇಗುಲ ಕಾಂತಾವರದ ‘ಯಕ್ಷೋಲ್ಲಾಸ’ | ಜುಲೈ 20
    Next Article ಅತ್ತಾವರ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ 109ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ
    roovari

    Add Comment Cancel Reply


    Related Posts

    ಕದ್ರಿ ದೇವಳದ ರಾಜಾಂಗಣದಲ್ಲಿ ತುಳು ಬರಹಗಳ ಗುಚ್ಚ ‘ಕಡ್ಲೆ ಬಜಿಲ್’ ಲೋಕಾರ್ಪಣೆ

    January 22, 2026

    ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ‘ದ ದಾಪರ್ ಎಕ್ಸ್ಪೋ’

    January 22, 2026

    ‘ಕಥಾಬಿಂದು ಸಾಹಿತ್ಯ ಸಂಭ್ರಮ’ದಲ್ಲಿ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ

    January 22, 2026

    ಪೂಚಂತೆ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ – 2026

    January 22, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.