ಬೆಂಗಳೂರು : ಇಂಡಿಯನ್ ಹೆರಿಟೇಜ್ ಅಕಾಡೆಮಿ ಕೋರಮಂಗಲ ಮತ್ತು ಆಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರ ಆಶ್ರಯದಲ್ಲಿ ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ ಪ್ರಸ್ತುತ ಪಡಿಸುವ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯ ಪ್ರದರ್ಶನವನ್ನು ದಿನಾಂಕ 28 ಜೂನ್ 2026ರಂದು ಸಂಜೆ 6-30 ಗಂಟೆಗೆ ಬೆಂಗಳೂರು ಕೋರಮಂಗಲ ಇಂಡಿಯನ್ ಹೆರಿಟೇಜ್ ಅಕಾಡೆಮಿಯಲ್ಲಿ ಆಯೋಜಿಲಾಗಿದೆ. ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕಾವ್ಯ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ಇದಾಗಿದೆ.
‘ಹಕ್ಕಿ ಮತ್ತು ಅವಳು’ ಒಂದು ಏಕವ್ಯಕ್ತಿ ಕನ್ನಡ ನಾಟಕ ಪ್ರದರ್ಶನವಾಗಿದ್ದು, ಕವಿತೆಗಳು, ಸಣ್ಣಕಥೆಗಳು ಹಾಗೂ ಪ್ರಬಂಧಗಳನ್ನು ಸಮ್ಮಿಳಿತಗೊಳಿಸಿ ಸ್ವಾತಂತ್ರ್ಯ ಮತ್ತು ವಿಮೋಚನೆಯ ಕುರಿತಾದ ಆಳವಾದ ಚಿಂತನೆಗೆ ನಮ್ಮನ್ನು ತೊಡಗಿಸುತ್ತದೆ. ವಿವಿಧ ಭಾಷೆಗಳು ಹಾಗೂ ಗಡಿಗಳನ್ನು ದಾಟಿ ಬಂದ ಸೃಜನಶೀಲ ಧ್ವನಿಗಳಿಂದ ರೂಪುಗೊಂಡಿರುವ ಈ ಪ್ರದರ್ಶನವು ಬಂಧನದಿಂದ ಬಿಡುಗಡೆಯ ಕನಸು ಕಾಣುವುದು ಎಂದರೇನು ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ. ಈ ಹೃದಯಸ್ಪರ್ಶಿ ಹಾಗೂ ಚಿಂತನಶೀಲ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ವೀಕ್ಷಿಸಲು ಇಂಡಿಯನ್ ಹೆರಿಟೇಜ್ ಅಕಾಡೆಮಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ. ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು, ನೋಂದಣಿಯ ಅಗತ್ಯವಿದೆ.

