ಮೈಸೂರು : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಥಿಯೇಟರ್ ಇವರ ವತಿಯಿಂದ ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ ಪ್ರಸ್ತುತ ಪಡಿಸುವ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕಾವ್ಯ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯ ಪ್ರದರ್ಶನವನ್ನು ದಿನಾಂಕ 27 ಜೂನ್ 2026ರಂದು ಸಂಜೆ 6-00 ಗಂಟೆಗೆ ಮೈಸೂರು ಜಿ. ಎಲ್. ಬಿ. ರಸ್ತೆ ಹಾರ್ಡ್ವಿಕ್ ಶಾಲಾ ಆವರಣ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
‘ಹಕ್ಕಿ ಮತ್ತು ಅವಳು’ ಒಂದು ಏಕವ್ಯಕ್ತಿ ಕನ್ನಡ ನಾಟಕ ಪ್ರದರ್ಶನವಾಗಿದ್ದು, ಕವಿತೆಗಳು, ಸಣ್ಣಕಥೆಗಳು ಹಾಗೂ ಪ್ರಬಂಧಗಳನ್ನು ಸಮ್ಮಿಳಿತಗೊಳಿಸಿ ಸ್ವಾತಂತ್ರ್ಯ ಮತ್ತು ವಿಮೋಚನೆಯ ಕುರಿತಾದ ಆಳವಾದ ಚಿಂತನೆಗೆ ನಮ್ಮನ್ನು ತೊಡಗಿಸುತ್ತದೆ. ವಿವಿಧ ಭಾಷೆಗಳು ಹಾಗೂ ಗಡಿಗಳನ್ನು ದಾಟಿ ಬಂದ ಸೃಜನಶೀಲ ಧ್ವನಿಗಳಿಂದ ರೂಪುಗೊಂಡಿರುವ ಈ ಪ್ರದರ್ಶನವು ಬಂಧನದಿಂದ ಬಿಡುಗಡೆಯ ಕನಸು ಕಾಣುವುದು ಎಂದರೇನು ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.

