Subscribe to Updates

    Get the latest creative news from FooBar about art, design and business.

    What's Hot

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರೋಟರಿ ಮಂಗಳೂರು ನಾರ್ತ್ ವತಿಯಿಂದ ‘ಹಳ್ಳಿ ಶಿಕ್ಷಕ’ ನಾಟಕಕ್ಕೆ ಭರ್ಜರಿ ಯಶಸ್ಸು
    Drama

    ರೋಟರಿ ಮಂಗಳೂರು ನಾರ್ತ್ ವತಿಯಿಂದ ‘ಹಳ್ಳಿ ಶಿಕ್ಷಕ’ ನಾಟಕಕ್ಕೆ ಭರ್ಜರಿ ಯಶಸ್ಸು

    September 26, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ರೋಟರಿ ಮಂಗಳೂರು ನಾರ್ತ್ ಕ್ಲಬ್ (R.I. 3181) ವತಿಯಿಂದ ದಿನಾಂಕ 22 ಸೆಪ್ಟೆಂಬರ್ 2026ರಂದು ಸಂಜೆ 7-00 ಗಂಟೆಗೆ ಆಯೋಜಿಸಿದ್ದ ‘ಹಳ್ಳಿ ಶಿಕ್ಷಕ’ ನಾಟಕವು ರೋಟೇರಿಯನ್ ಗಳ ಅಭಿನಯದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಈ ದಿನದ ಡಿನ್ನರ್ ಮೀಟಿಂಗ್ ಅನ್ನು ರೊ. ಅಜಿತ್ ರಾವ್ ಮತ್ತು ರೊ. ಆರ್.ಎಂ. ಗೊಗೆರಿ ಅವರು ಆಯೋಜಿಸಿದ್ದರು.

    ‘ಹಳ್ಳಿ ಶಿಕ್ಷಕ’ ಕೇವಲ ನಾಟಕವಲ್ಲ, ಇಂದಿನ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ. ಶಿಕ್ಷಣದ ಮಹತ್ವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ರಂಗಭೂಮಿ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಯಿತು.

    ಈ ನಾಟಕದ ಪಾತ್ರವರ್ಗದಲ್ಲಿ ಶ್ರೀಮತಿ ಅಕೃತಿ ಭಟ್, ಶ್ರೀಮತಿ ಅನಿತಾ ಶೆಣೈ, ಶ್ರೀಮತಿ ಮುಬೀನಾ ಪರವೀನ್ ತಾಜ್, ವಿಘ್ನೇಶ ಭಿಡೆ, ರೊ. ಅಜಿತ್, ಶ್ರೀ ವಿಶ್ವನಾಥ್ ಶೆಟ್ಟಿ, ಶ್ರೀಮತಿ ರೇಖಾ ಸುದೇಶ್ ರಾವ್, ಶ್ರೀಮತಿ ಕಸ್ತೂರಿ, ಆಕಾಶವಾಣಿ ಉದ್ಘೋಷಕಿ ಶ್ರೀಮತಿ ಸುಲೋಚನಾ ನವೀನ್ ಅವರು ಅಭಿನಯಿಸಿದರು. ರೊ. ಆರ್.ಎಂ. ಗೊಗೆರಿ ಈ ನಾಟಕವನ್ನು ನಿರ್ದೇಶಿಸಿದ್ದರು ಮತ್ತು ಅಭಿನಯಿಸಿದ್ದರು.

    ವೇದಿಕೆಯಲ್ಲಿ ನೆರೆದಿದ್ದ ರೋಟರಿ ಅಧ್ಯಕ್ಷ ರೊ. ಸುದರ್ಶನ ನಾಯಕ್, ಕಾರ್ಯದರ್ಶಿ ರೊ. ಗಣೇಶ್ ಹೆಗ್ಡೆ ಕೆ., ಬುಲೆಟಿನ್ ಸಂಪಾದಕ ರೊ. ಡಾ. ಸತೀಶ್ ಕುಮಾರ್ ಶೆಟ್ಟಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಕಲಾವಿದರನ್ನು ಅಭಿನಂದಿಸಿದರು. ಬೊಳುoಬು ಗೋಪಾಲಕೃಷ್ಣ ಭಟ್ ಅವರು ನಾಟಕದ ಪೂರ್ಣ ಛಾಯಾಗ್ರಹಣ ಮಾಡಿದರು.

    ನಾಟಕದ ಕೊನೆಯಲ್ಲಿ ಪ್ರತಿಭಾವಂತ ಮಕ್ಕಳನ್ನು ಕಂಡು ಹಳ್ಳಿಯ ಮುಖಂಡರು ತಪ್ಪು ಅರಿತು ಶಿಕ್ಷಕರನ್ನು ಗೌರವಿಸುವ ದೃಶ್ಯವು ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತು. ಈ ಕಾರ್ಯಕ್ರಮದಲ್ಲಿ ಪ್ರಧಾನ ಭೂಮಿಕೆಯಲ್ಲಿದ್ದ, ಲಯನ್ ಆಯುಷ್ ಫೆಡರೇಷನ್ ಉಪಾಧ್ಯಕ್ಷ ಮೂಲವ್ಯಾಧಿ ತಜ್ಞ ಡಾ. ಸುರೇಶ್ ನೆಗಳಗುಳಿ ಅವರು ಸಹ ಕಲಾವಿದರನ್ನು ಅಭಿನಂದಿಸಿದರು.

    ಡಾ ಸುರೇಶ ನೆಗಳಗುಳಿ
    ‘ಸುಹಾಸ’, ಬಜಾಲ್, ಮಂಗಳೂರು -575009.

    baikady drama Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ
    Next Article ಎಡನೀರಿನಲ್ಲಿ ‘ಬೆಟ್ಟದ ಬುಡದಲ್ಲಿರುವ ಬಂಡಿ’ ಕವನ ಸಂಕಲನ ಬಿಡುಗಡೆ ಮತ್ತು ಕಾವ್ಯ ಚಿಂತನ
    roovari

    Add Comment Cancel Reply


    Related Posts

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026

    ಬಿ.ಎಂ.ಶ್ರೀ ಸಭಾಂಗಣದಲ್ಲಿ ‘ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿ 2026’ | ಅಕ್ಟೋಬರ್ 13ರಿಂದ 17

    October 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.