Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿವೇಕಾನಂದ ಕಾಲೇಜಿನಲ್ಲಿ ‘ಹಂಸಧ್ವನಿ’ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
    Felicitation

    ವಿವೇಕಾನಂದ ಕಾಲೇಜಿನಲ್ಲಿ ‘ಹಂಸಧ್ವನಿ’ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

    March 12, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಬೈಂದೂರು ಪ್ರಭಾಕರ ರಾವ್ ಸಭಾ ಭವನದಲ್ಲಿ ಸುನಾದ ಸಂಗೀತ ಕಲಾ ಶಾಲೆ ಪುತ್ತೂರು, ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ‘ಹಂಸಧ್ವನಿ’ ಸುನಾದ ವಿವೇಕ ಸ್ಮೃತಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ದಿನಾಂಕ 11 ಮಾರ್ಚ್ 2026ರಂದು ನಡೆಯಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಸುನಾದ ಸಂಗೀತ ಕಲಾ ಶಾಲೆಯ ನಿರ್ದೇಶಕ ವಿದ್ವಾನ್ ಕಾಂಚನ ಎ. ಈಶ್ವರ ಭಟ್ “ಸಂಗೀತವೆಂದರೆ ಒಂದು ಕುಟುಂಬವಿದ್ದಂತೆ. ಸಂಗೀತ ಹೇಳುವುದು ಹಾಗೂ ಕೇಳುವುದರಲ್ಲಿ ಭಾವನೆಗಳ ವಿನಿಮಯವಾಗುವುದು. ಲಲಿತ ಕಲೆಗಳಲ್ಲಿ ಅಮೋಘವಾದುದು ಹಾಗೂ ದೈವಿಕ ಕಲೆ ಎನಿಸಿಕೊಂಡದ್ದು ಶಾಸ್ತ್ರೀಯ ಸಂಗೀತ. ಇಂತಹಾ ಶಾಸ್ತ್ರಬದ್ಧವಾದ ಯಾವುದೇ ಕಲೆಗಳನ್ನು ಕಲಿತುಕೊಳ್ಳಲು ಗುರು ಅವಶ್ಯ. ಗುರು ಎಂದರೆ ಬದುಕಿಗೆ ದಾರಿ ತೋರುವವನು ಎಂದರ್ಥ. ನಮ್ಮ ಸ್ವಂತಿಕೆ ಎಂಬುದಾಗಿ ಕಲೆಗೆ ಸೂಕ್ತವಲ್ಲದ ಸಂಗತಿಗಳನ್ನು ಮಾಡದೇ ಗುರು ತೋರಿದ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದಾಗ ಶಿಷ್ಯ ನಿಪುಣನಾಗುತ್ತಾನೆ” ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹಾಗೂ ಸಂಚಾಲಕ ಮುರಳಿ ಕೃಷ್ಣ ಕೆ.ಎನ್‌. ಶುಭ ಹಾರೈಸಿದರು. ವೇದಿಕೆಯಲ್ಲಿ ಹಿರಿಯ ಪಿಟೀಲು ವಾದಕ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ, ಸಂಗೀತ ವಿದ್ವಾನ್‌ ಟಿ.ಎಸ್. ಪಟ್ಟಾಭಿರಾಮ ಪಂಡಿತ್ ಬೆಂಗಳೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಸ್ವಾಗತಿಸಿದರು. ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್‌. ಧನ್ಯವಾದ ಸಮರ್ಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾಕುಮಾರಿ ಟಿ. ನಿರ್ವಹಿಸಿದರು.

    ಈ ಸಂದರ್ಭದಲ್ಲಿ ‘ಸಂಗೀತ ಮತ್ತು ಜೀವನ ಮೌಲ್ಯ’ ಎಂಬುದರ ಕುರಿತಾಗಿ ಮಾತನಾಡಿದ ವಿದ್ವಾನ್‌ ಟಿ.ಎಸ್. ಪಟ್ಟಾಭಿರಾಮ ಪಂಡಿತ್, “ಓಂಕಾರ ಎಂಬುದು ಒಂದು ನಾದವಾಗಿ ಎಲ್ಲವೂ ಅದರೊಳಗೆ ಅಡಕವಾಗಿವೆ. ನಾವು ನಮ್ಮೊಳಗಿನ ರಾಕ್ಷತಸ್ವವನ್ನು ತೊಡೆದು ಹಾಕಬೇಕು. ಅಲ್ಲದೇ ನಮ್ಮೊಳಗೆ ಒಂದು ಅದ್ಭುತ ವ್ಯಕ್ತಿತ್ವವನ್ನು ರೂಪಿಸಲು ಸಂಗೀತ ಕಾರಣವಾಗುತ್ತದೆ. ನಮ್ಮನ್ನು ಪರಸ್ಪರ ಒಗ್ಗೂಡಿಸಿ ಸಜ್ಜನಿಕೆಯನ್ನು ರೂಪಿಸುತ್ತದೆ. ನಮ್ಮ ಸಂಪೂರ್ಣ ಮನಸನ್ನೇ ಶುದ್ಧಗೊಳಿಸುವ ತಾಕತ್ತು ಸಂಗೀತಕ್ಕಿದೆ. ಸಂಗೀತವನ್ನು ನಿತ್ಯ ಅಭ್ಯಾಸ ಮಾಡಿಕೊಳ್ಳಲೇಬೇಕು. ಗುರು ಎಂದರೆ ಶಕ್ತಿ. ಗುರು-ಶಿಷ್ಯ ಸಂಬಂಧದಲ್ಲಿನ ಚುರುಕುತನವನ್ನು ಅರಿತುಕೊಳ್ಳಲು ಲಲಿತ ಕಲೆಗಳು ಸಹಾಯಕ” ಎಂದು ನುಡಿದರು.

    ತದನಂತರದಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ ಇವರು ‘ಸಂಗೀತ ಮತ್ತು ಭಾವ’ ಎನ್ನುವ ವಿಚಾರವನ್ನು ತಮ್ಮ ಹಾಡುಗಾರಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಿದರು. ನಂತರ ವಿದ್ವಾನ್ ಬಾಲಕೃಷ್ಣ ಹೊಸಮನೆ ಹಾಗೂ ಡಾ. ನಿಶಿತಾ ಪುತ್ತೂರು ಇವರ ಪರಿಕಲ್ಪನೆಯಲ್ಲಿ ಭಾವರಾಗ ತಾಳ ನಾಟ್ಯವನ್ನು ಒಳಗೊಂಡಿರುವ ‘ಪ್ರದರ್ಶನಂ’ ಎನ್ನುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ, ವಿದ್ವಾನ್‌ ಟಿ.ಎಸ್. ಪಟ್ಟಾಭಿರಾಮ ಪಂಡಿತ್ ಹಾಗೂ ಪುತ್ತೂರಿನ ಸುನಾದ ಸಂಗೀತ ಕಲಾ ಶಾಲೆಯ ನಿರ್ದೇಶಕ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮತ್ತು ವಿದ್ವಾನ್ ಬಾಲಕೃಷ್ಣ ಹೊಸಮನೆ ಇವರಿಗೆ ಗೌರವ ಸಮರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಕಾರ್ಯಕ್ರಮ ಜರುಗಿದ್ದು ಹಾಡುಗಾರಿಕೆಯಲ್ಲಿ ವಿದ್ವಾನ್‌ ಟಿ.ಎಸ್. ಪಟ್ಟಾಭಿರಾಮ ಪಂಡಿತ್, ಪಿಟೀಲಿನಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರು ಹಾಗೂ ಮೋರ್ಸಿಂಗ್‌ನಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಸಹಕರಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ವಿಶೇಷಾಧಿಕಾರಿ ಡಾ. ಮನಮೋಹನ ಸಂಯೋಜಿಸಿದರು.

    baikady felicitation Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ದಲಿಯನ ಡೋಲು’ ಯಶಸ್ವಿ ಪ್ರದರ್ಶನ
    Next Article ಕುಂಟಾರು ಶಾಲೆಯಲ್ಲಿ ‘ಕುಂಟಾರು ಸಾಹಿತ್ಯೋತ್ಸವ 2026 | ಮಾರ್ಚ್ 15
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.