ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ ವತಿಯಿಂದ ತೆಕ್ಕಟ್ಟೆ ಹಯಗ್ರೀವದ ಯಶಸ್ವಿ ಯಕ್ಷಗಾನ ಕೇಂದ್ರದಲ್ಲಿ ದಿನಾಂಕ 06 ಜೂನ್ 2026ರಂದು ಮಧ್ಯಾಹ್ನ 3-00 ಗಂಟೆಗೆ ಹಿಮ್ಮೇಳ ಮುಮ್ಮೇಳ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಯಕ್ಷ ಗುರುಗಳಾದ ಗುಂಡ್ಮಿ ಸದಾನಂದ ಐತಾಳ್ ಇವರು ಉದ್ಘಾಟನೆ ಮಾಡಲಿದ್ದು, ಯಕ್ಷಗಾನಾಸಕ್ತರು, ಅಭ್ಯಾಸಿಗರು ಕ್ಲಪ್ತ ಸಮಯಕ್ಕೆ ಹಾಜರಿದ್ದು ನಡೆಸಿಕೊಡಬೇಕೆಂಬುದು ಅಕ್ಕರೆಯ ವಿನಂತಿ. ಆರು ತಿಂಗಳುಗಳ ಕಾಲ ನಿರಂತರವಾಗಿ ನಡೆಯುವ ತರಗತಿಯಲ್ಲಿ ಇನ್ನಷ್ಟು ಹಿರಿಯ, ಕಿರಿಯ ವಿದ್ಯಾರ್ಥಿಗಳು ಕಲಿಕೆಯಲ್ಲಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9945947771 ಮತ್ತು 9448721616 ಸಂಖ್ಯೆಗಳನ್ನು ಸಂಪರ್ಕಿಸಿರಿ.

