ಕುಂದಾಪುರ : ಕುಂದಾಪುರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ‘ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ಯ ಉದ್ಘಾಟನಾ ಸಮಾರಂಭವು ಮಹಿಳಾ ದಿನಾಚರಣೆಯೊಂದಿಗೆ ದಿನಾಂಕ 12 ಮಾರ್ಚ್ 2026ರಂದು ಸಂಜೆ 4-00 ಗಂಟೆಗೆ ಶಾಸ್ತ್ರಿ ಸರ್ಕಲ್ ಸಮೀಪದ ಕಾಲೇಜು ರಸ್ತೆಯಲ್ಲಿರುವ ಜನಪ್ರತಿನಿಧಿ ವಾರಪತ್ರಿಕೆಯ ಕಛೇರಿಯ ಸಭಾಭವನದೊಳಗೆ ನಡೆಯಲಿದೆ.
ಲೇಖಕಿ ಮತ್ತು ರಂಗ ನಟಿ ಪೂರ್ಣಿಮಾ ಸುರೇಶ್ ವೇದಿಕೆಯ ಉದ್ಘಾಟನೆ ಮಾಡಲಿದ್ದು, ಲೇಖಕಿ ಮತ್ತು ಕಲಾವಿದೆ ಸುಪ್ರಸನ್ನ ನಕ್ಕತ್ತಾಯರವರು ಮುಖ್ಯ ಅತಿಥಿಗಳಾಗಿರುತ್ತಾರೆ. ವೇದಿಕೆಯ ಗೌರವಾಧ್ಯಕ್ಷರಾದ ಡಾ. ಪಾರ್ವತಿ ಜಿ. ಐತಾಳ್ ಸಭಾದ್ಯಕ್ಷತೆ ವಹಿಸಲಿದ್ದು, ಮಹಿಳಾ ದಿನಾಚರಣೆಯ ಅಂಗವಾಗಿ ಚಿತ್ರಕಲಾವಿದೆ ಶ್ರೀಮತಿ ನೇಹಾ ಗಂಗೊಳ್ಳಿಯವರನ್ನು ಸನ್ಮಾನಿಸಲಾಗುವುದು. ಕಾರ್ಯದರ್ಶಿ ಪೂರ್ಣಿಮಾ ನರಸಿಂಹ, ಜತೆ ಕಾರ್ಯದರ್ಶಿ ಜೆಸ್ಸಿ ಎಲಿಝಬೆತ್, ಸುಪ್ರೀತಾ ಪುರಾಣಿಕ್ ಮತ್ತು ಸುಮತಿ ಶೆಣೈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರೋಹಿಣಿ ಹತ್ವಾರ್, ಶ್ರೀದೇವಿ ಹಂದೆ ಮೊದಲಾದವರಿಂದ ಭಾವಗೀತೆಗಳ ಗಾಯನವಿದೆ. ಕಾರ್ಯಕ್ರಮದ ಯೂ ಟ್ಯೂಬ್ ಲೈವ್ ಪ್ರಸಾರವಿದೆ.

