ಚನ್ನರಾಯಪಟ್ಟಣ : ಪ್ರತಿಮಾ ಟ್ರಸ್ಟ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಬಿ.ಇ.ಓ ಕಚೇರಿ ಹಿಂಭಾಗ ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ‘ವಾರ್ಷಿಕ ತರಬೇತಿ ಶಿಬಿರ’ದ ಉದ್ಘಾಟನಾ ಸಮಾರಂಭವು ದಿನಾಂಕ 12-07-2024 ಬೆಳಗ್ಗೆ 10-30 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕತ್ತರಿಘಟ್ಟದ ಮಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಇವರ ಉಪಸ್ಥಿತಿಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಡಾ. ಸಿ.ಎನ್. ಬಾಲಕೃಷ್ಣ ಇವರು ಉದ್ಘಾಟಿಸಲಿದ್ದು, ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಉಮೇಶ್ ತೆಂಕನಹಳ್ಳಿ ಅಧ್ಯಕ್ಷತೆ ವಹಿಸಲಿರುವರು.