ಶಿರ್ವ : ಪ್ರದರ್ಶನ ಸಂಘಟನಾ ಸಮಿತಿ ಶಿರ್ವ ಸಹಯೋಗದೊಂದಿಗೆ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 15 ಡಿಸೆಂಬರ್ 2024ರಂದು ಶಿರ್ವದ ಮಹಿಳಾ ಸೌಧದಲ್ಲಿ ಸಂಜೆ 5-00 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಿವೃತ್ತ ಉಪನ್ಯಾಸಾಕಿ ಶ್ರೀಮತಿ ಶಾರದಾ ಎಂ. ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದಿನಾಂಕ 15 ಡಿಸೆಂಬರ್ 2024ರಂದು ಇನ್ನಂಜೆಯ ಎಸ್.ವಿ.ಎಚ್. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಶಶಿಪ್ರಭಾ ಪರಿಣಯ’ ಮತ್ತು ಕುತ್ಯಾರು ಸೂರ್ಯಚೈತನ್ಯ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’, ದಿನಾಂಕ 16 ಡಿಸೆಂಬರ್ 2024ರಂದು ಮಣಿಪುರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ವೀರವರ್ಮ ವಿಜಯ’ ಮತ್ತು ಕಟಪಾಡಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಅಭಿಮನ್ಯು ಕಾಳಗ’, ದಿನಾಂಕ 17 ಡಿಸೆಂಬರ್ 2024ರಂದು ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಶಿವಪಂಚಾಕ್ಷರೀ ಮಹಿಮೆ’ ಮತ್ತು ಶಿರ್ವ ಹಿಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ‘ಸ್ವಯಂಪ್ರಭಾ ಪರಿಣಯ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.