Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಂಚಯಗಿರಿಯಲ್ಲಿ ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹದ ಪ್ರಾರಂಭೋತ್ಸವ
    Bharathanatya

    ಸಂಚಯಗಿರಿಯಲ್ಲಿ ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹದ ಪ್ರಾರಂಭೋತ್ಸವ

    March 27, 2026Updated:April 3, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಕಲಾದೀಪ ಎಂದೇ ಕಲಾಕ್ಷೇತ್ರದಲ್ಲಿ ಪ್ರಖ್ಯಾತರಾದ ನೃತ್ಯದಂಪತಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಪುತ್ತೂರು ಇವರ ವಿಭಿನ್ನ ಯೋಜನೆ ರಾಮನವಮಿಯ ಪ್ರಯುಕ್ತ ‘ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹ’ ಇದರ ಪ್ರಾರಂಭ ದಿನದ ಕಾರ್ಯಕ್ರಮವು ಬಿ.ಸಿ. ರೋಡಿನ ಸಂಚಯಗಿರಿಯ ಶ್ರೀ ಶ್ಯಾಂ ಪ್ರಸಾದ್ ಪಾರೆ ಮತ್ತು ಶ್ರೀಮತಿ ಪಲ್ಲವಿ ಸಾವಿತ್ರಿ ದಂಪತಿಗಳ ಸ್ವಗೃಹ ‘ಗಣೇಶ ಕೃಪಾ’ದಲ್ಲಿ ದಿನಾಂಕ 24 ಮಾರ್ಚ್ 2026ರಂದು ನಡೆಯಿತು.

    ಈ ಕಾರ್ಯಕ್ರಮವನ್ನು ಅಬ್ಬಕ್ಕ ರಾಣಿ ತುಳು ಅಧ್ಯಯನ ಕೇಂದ್ರದ ಶ್ರೀ ತುಕಾರಾಮ್ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ಹಾಗೂ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಇದರ ಬೇರೆ ಬೇರೆ ಪರಿಸರ ಸ್ನೇಹಿ ಯೋಜನೆಗಳ ಬಗ್ಗೆ ವಿದುಷಿ ವಸುಧಾ ಇವರು ವಿವರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ದಿಯಾ ಪ್ರವೀಣ್ ನಡೆಸಿಕೊಟ್ಟರು.

    ವಿದ್ವಾನ್ ಗಿರೀಶ್ ಕುಮಾರ್ ಶಂಖನಾದ, ಕುಮಾರಿ ಮಾತಂಗಿ ಇವರು ಓಂಕಾರ, ಕುಮಾರಿ ಸನ್ನಿಧಿ ಇವರು ಪ್ರಾರ್ಥನೆ, ಕುಮಾರಿ ಅನುಧ್ಯಾ ಇವರು ಪಂಚಾಂಗ ಪಠಣ ನಡೆಸಿಕೊಟ್ಟರು. ಅಭ್ಯಾಗತರದ ಡಾಕ್ಟರ್ ತುಕಾರಾಮ ಪೂಜಾರಿ ಇವರ ಪರಿಚಯವನ್ನು ಕುಮಾರಿ ಸಿಂಚನ, ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಇವರ ಪರಿಚಯವನ್ನು ಕುಮಾರಿ ಆರಾಧ್ಯ ಇವರು ನಡೆಸಿಕೊಟ್ಟರು. ನಂತರ ಕಲಾದೀಪ ದಂಪತಿಗಳಿಗೆ ಸಂಪೂರ್ಣ ರಾಮಾಯಣ ರೂಪಕ ಅದ್ಭುತವಾಗಿ ಮೂಡಿಬಂತು. ಕಾರ್ಯಕ್ರಮದ ಕೊನೆಯಲ್ಲಿ ಡಾಕ್ಟರ್ ತುಕಾರಾಮ ಪೂಜಾರಿ ಇವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

    ನಿವೃತ್ತ ಉಪನ್ಯಾಸಕರಾದ ಶ್ರೀ ರಾಜಮಣಿ ರಾಮಕುಂಜ ಇವರು ಕಾರ್ಯಕ್ರಮದ ವಿಮರ್ಶೆಯನ್ನು ಬಹಳ ಚೆನ್ನಾಗಿ ಮಾಡಿದರು. ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಇವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕೊನೆಯಲ್ಲಿ ಶ್ಯಾಮ್ ಪ್ರಸಾದ್ ಇವರು ವಂದನಾರ್ಪಣೆಯನ್ನು ಮಾಡಿದರು.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪ್ರೊ. ಭಾಲಚಂದ್ರ ಜಯಶೆಟ್ಟಿಯವರ ಕೃತಿಗೆ ಪ್ರಶಸ್ತಿ
    Next Article ಪುಸ್ತಕ ಪ್ರೀತಿ ಪರಿಚಯ ಸರಣಿ – ಪುಸ್ತಕ ವಿಮರ್ಶಾ ಕಾರ್ಯಕ್ರಮ
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.