Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವರ್ಲ್ಡ್ ಮಲೆಯಾಳಿ ಕೌನ್ಸಿಲಿನ ಉಡುಪಿ ಶಾಖೆಯ ಉದ್ಘಾಟನೆ
    Literature

    ವರ್ಲ್ಡ್ ಮಲೆಯಾಳಿ ಕೌನ್ಸಿಲಿನ ಉಡುಪಿ ಶಾಖೆಯ ಉದ್ಘಾಟನೆ

    April 13, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕಿದಿಯೂರು ಹೋಟೆಲಿನ ಶೇಷಶಯನ ಹಾಲ್ ನಲ್ಲಿ ದಿನಾಂಕ 05 ಏಪ್ರಿಲ್ 2026ರಂದು ವರ್ಲ್ಡ್ ಮಲೆಯಾಳಿ ಕೌನ್ಸಿಲಿನ ಉಡುಪಿ ಶಾಖೆಯು ಉದ್ಘಾಟನೆಗೊಂಡಿತು

    ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ “ಕೇರಳದ ಮಣ್ಣಿನಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಚದುರಿ ಹೋಗಿರುವ ಮಲೆಯಾಳಿಗಳನ್ನು ಭ್ರಾತೃತ್ವದ ಬೆಸುಗೆಯಿಂದ ಒಂದುಗೂಡಿಸುವ ಪ್ರಯತ್ನವನ್ನು ಶ್ರದ್ಧೆಯಿಂದ ಮಾಡುತ್ತಿರುವ ಜಾಗತಿಕ ಮಲೆಯಾಳಿ ಮಹಾಮಂಡಲ (ವರ್ಲ್ಡ್ ಮಲೆಯಾಳಿ ಕೌನ್ಸಿಲ್)ದ ಕಾರ್ಯವು ಅತ್ಯಂತ ಸ್ತುತ್ಯರ್ಹವಾದುದು” ಎಂದು ಹೇಳಿದರು.

    ವರ್ಲ್ಡ್ ಮಲೆಯಾಳಿ ಸಂಘಟನೆಯ ಇಂಡಿಯಾ ರೀಜನ್ ಅಧ್ಯಕ್ಷರಾದ ಪಿ. ಪದ್ಮಕುಮಾರ್ ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳಲ್ಲಿ 600ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಸಂಘಟನೆಯು ನಿರಂತರವಾಗಿ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳ ಕುರಿತು ವಿವರಗಳನ್ನಿತ್ತು “ಇಂಡಿಯಾ ರೀಜನ್ ಒಳಗೆ ಕೇರಳದ ಹೊರಗೆ ಆರಂಭವಾಗುತ್ತಿರುವ ಉಡುಪಿ ಶಾಖೆಯಿಂದ ಮಲೆಯಾಳಿಗರ ಮತ್ತು ಕನ್ನಡಿಗರ ನಡುವಣ ಸಾಂಸ್ಕೃತಿಕ ಸಂಬಂಧ ಗಟ್ಟಿಯಾಗಲು ಸಾಧ್ಯ” ಎಂದು ಹೇಳಿದರು.

    ಸಂಘಟನೆಯ ಗ್ಲೋಬಲ್ ಕಾರ್ಯದರ್ಶಿ ವಿಜಯಚಂದ್ರನ್ ಮಾತನಾಡಿ “ವರ್ಲ್ಡ್ ಮಲೆಯಾಳಿ ಆರಂಭಿಸಿದ ಸ್ನೇಹಯಾತ್ರೆ ಉಡುಪಿ ಶಾಖೆಯ ಮೂಲಕ ಮುಂದುವರೆಯಲಿ” ಎಂದರು. ಇಂಡಿಯಾ ರಿಜನ್ನಿನ ಉಪಾಧ್ಯಕ್ಷರಾದ ರಾಮಚಂದ್ರನ್ ಪೆರಾಂಬ್ರ ಮತ್ತು ಗ್ಲೋಬಲ್ ಮಟ್ಟದ ಇಂಡಿಯಾ ರೀಜನ್ನಿನ ಉಪಾಧ್ಯಕ್ಷ ಸುರೇಂದ್ರ ಕನ್ನಾತ್ತ್ ಶಾಖೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಡಾ. ವಿನೋದ್ ಥಾಮಸ್ ವರ್ಲ್ಡ್ ಮಲೆಯಾಳಿ ಸಂಘದ ಆಶ್ರಯದಲ್ಲಿ ಉಡುಪಿ ಶಾಖೆ ರೂಪುಗೊಂಡಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

    ಉಡುಪಿ ಪ್ರಾವಿನ್ಸ್ ನ ಪದಾಧಿಕಾರಿಗಳಾಗಿ ಆಯ್ಕೆಯಾದ ಷಿನೋದ್ ಟಿ.ಆರ್. (ಚೇರ್ಮನ್) ಬಿನೇಶ್ ವಿ.ಸಿ. (ಅಧ್ಯಕ್ಷ), ಬಿನಿಲ್ ವಿ. (ಕಾರ್ಯದರ್ಶಿ), ಡಯಾಸ್ ಚೆರಿಯನ್ (ಖಜಾಂಚಿ), ಸುಗುಣಕುಮಾರ್ ಮತ್ತು ಕೆ.ಪಿ. ಶ್ರೀಶನ್ (ಉಪಾಧ್ಯಕ್ಷರು), ಪಾರ್ವತಿ ಜಿ. ಐತಾಳ್ (ಸಲಹೆಗಾರರು), ಸಂತೋಷ ಕುಮಾರ್ ಮತ್ತು ರಾಹಿಮೋನ್ (ಜತೆ ಕಾರ್ಯದರ್ಶಿಗಳು), ಸುನೀಲ್ ಕುಮಾರ್ ಪಿ. ಮತ್ತು ಸುಧೀಷಚಂದ್ರನ್ ಕೆ.ಸಿ. (ಸಹ ಖಜಾಂಚಿಗಳು), ರಾಜನ್ ಫಿಲಿಪ್, ಗಣೇಶ ವಕೇರಿ, ವರ್ಕಿ ಎಂ. ಬರ್ನಾರ್ಡೋಸ್ ಮತ್ತು ಷಾಜಿ ವಿ. ಕರುಣ್ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಸುರೇಂದ್ರ ಕನ್ನಾತ್ತ್ ಅವರ ಕೈಯಿಂದ ಪ್ರತಿಜ್ಣಾ ವಿಧಿಯನ್ನು ಸ್ವೀಕರಿಸಿದರು. ಗ್ಲೋಬಲ್ ಸಮಿತಿಯ ಮತ್ತು ಇಂಡಿಯಾ ರಿಜನ್ನಿನ ಪದಾಧಿಕಾರಿಗಳು ಉಡುಪಿ ಶಾಖೆಯ ಅಸ್ತಿತ್ವವನ್ನು ಒಪ್ಪಿಕೊಂಡು ಅವರನ್ನು ಸನ್ಮಾನಿಸಿದರು. ಮನೀತಾ ಕಾರ್ಯಕ್ರಮ ನಿರ್ವಹಿಸಿದರು. ಮಧುಕರ್ ಪ್ರಾರ್ಥನಾ ಗೀತೆ ಹಾಡಿದರು. ರಾಜಿ ಮೋನ್ ಧನ್ಯವಾದ ಸಮರ್ಪಿಸಿದರು.

    Literature Maleyalam
    Share. Facebook Twitter Pinterest LinkedIn Tumblr WhatsApp Email
    Previous Articleಕುಮಾರಿ ಆತ್ಮಿ ಶೆಟ್ಟಿ ಇವರ ‘ಭರತನಾಟ್ಯ ರಂಗಪ್ರವೇಶ’
    Next Article ಯಕ್ಷಗಾನ ಕಲಾರಂಗದ ‘ಯಕ್ಷಶಿಕ್ಷಣ ಸನಿವಾಸ ಶಿಬಿರ -2026’ ಸಮಾರೋಪ ಸಮಾರಂಭ | ಏಪ್ರಿಲ್ 14
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಮಾಸ್ತಿಯವರ ‘ಶೇಷಮ್ಮ’

    June 6, 2026

    ಪುಸ್ತಕ ವಿಮರ್ಶೆ | ಇಂಗ್ಲೀಷ್ ಗೆ ಅನುವಾದಿಸಿದ ತುಳು ನಾಟಕ ‘ಪಿಂಗಾರದ ಬಾಲೆ ಸಿರಿ’

    June 5, 2026

    ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಡಾ. ಶಿವರಾಮ ಶೆಟ್ಟಿ ಆಯ್ಕೆ

    June 5, 2026

    ಹಾಸನ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಮುಂಗಾರು ಕವಿಗೋಷ್ಠಿ

    June 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.