ಧಾರವಾಡ : ವಿದ್ಯಾಕಾಶಿ – ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ನವ ಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆಯ ಶುಭಾರಂಭ ಹಾಗೂ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 13-04-2024ರಂದು ಬೆಳಗ್ಗೆ 10-00 ಗಂಟೆಗೆ ಧಾರವಾಡ ಮಹಾನಗರ ಪಾಲಿಕೆಯ ಬಳಿ, ಎಲ್.ಇ.ಎ. ಕ್ಯಾಂಪಸ್ ಲಿಂಗಾಯತ ಟೌನ್ ಹಾಲ್ ಇಲ್ಲಿ ನಡೆಯಲಿರುವುದು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಜನಪರ ಚಿಂತಕರು ಮತ್ತು ಶಿಕ್ಷಣ ತಜ್ಞರಾದ ಡಾ. ಜಿ. ರಾಮಕೃಷ್ಣ ಇವರು ಮಳಿಗೆಯ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಉಪನಿಷತ್ತುಗಳು’, ಅಂಬೇಡ್ಕರ್ ಮತ್ತು ಮಾರ್ಕ್ಸ್’, ಸಾವಿತ್ರಿಬಾಯಿ’, ‘ಲೀಲಾವತೀ ಮತ್ತು ಇತರ ವಿಜ್ಞಾನ ನಾಟಕಗಳು’ ಮತ್ತು ‘ಭೂಮಿಕಾ’ ಎಂಬ ಕೃತಿಗಳನ್ನು ಸಾಂಸ್ಕೃತಿಕ ಚಿಂತಕರಾದ ಶ್ರೀ ರಂಜಾನ್ ದರ್ಗಾ ಮತ್ತು ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕರಾದ ಡಾ. ಎಂ. ಚಂದ್ರ ಪೂಜಾರಿ ಇವರುಗಳು ಲೋಕಾರ್ಪಣೆಗೊಳಿಸಲಿರುವರು.