ಯಲ್ಲಾಪುರ : ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ, ಪ್ರೇರಣಾ ಸಂಸ್ಥೆ ಗುಂದ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರ ಸಹಯೋಗದಲ್ಲಿ ವಿನೂತನ ತಾಳಮದ್ದಳೆ ಕಮ್ಮಟ ‘ಸಂವಾದ ಪಂಚಕ’ ಆಯ್ದ ಐದು ಯಕ್ಷಗಾನ ಪ್ರಸಂಗಗಳ ಸಂವಾದ ಕಾರ್ಯಕ್ರಮವನ್ನು ದಿನಾಂಕ 22 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಮಹೇಶ ಭಟ್ಟರ ಮನೆ ಹಸರಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಸಿದ್ಧ ಅರ್ಥದಾರಿಗಳಾದ ಶ್ರೀ ಎಮ್.ಎನ್. ಹೆಗಡೆ ಹಳವಳ್ಳಿ ಇವರು ಕಮ್ಮಟದ ಸಮಗ್ರ ಅವಲೋಕನಕ್ಕಾಗಿ ಮತ್ತು ಪ್ರಸಿದ್ಧ ಅರ್ಥದಾರಿ, ಚಿಂತಕ ಮತ್ತು ಬರಹಗಾರರಾದ ಶ್ರೀ ರಾಧಾಕೃಷ್ಣ ಕಲ್ಚಾರ್ ವಿಟ್ಲ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ‘ಧರ್ಮಾಂಗದ ದಿಗ್ವಿಜಯ’, ‘ಜಾಂಬವತೀ ಕಲ್ಯಾಣ’, ‘ಶರಸೇತು ಬಂಧನ’, ‘ಶ್ರೀರಂಗ ತುಲಾಭಾರ’, ‘ರಾಮನಿರ್ಯಾಣ’ ಎಂಬ ಪ್ರಸಂಗಗಳ ಸಂವಾದ ನಡೆಯಲಿದೆ.