ಮಂಗಳೂರು : ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ವಚನ ಕಲ್ಯಾಣ’ ಅಹೋರಾತ್ರಿ ನಾಟಕ ಸಿದ್ಧಪಡಿಸಿ ಪ್ರದರ್ಶಿಸಲು ಯುವಕ ಯುವತಿಯರು, ರಂಗಕಲಾವಿದರು ಮತ್ತು ಗಾಯಕರಿಂದ ಅರ್ಜಿ ಆಹ್ವಾನಿಸಲಾಗಿದೆ.
18ರಿಂದ 40ವರ್ಷ ವಯಸ್ಸಿನ, ರಂಗಶಿಕ್ಷಣದಲ್ಲಿ ತರಬೇತಿ ಹೊಂದಿರುವವರಿಗೆ ಆದ್ಯತೆ ಇರುತ್ತದೆ. ಅರ್ಜಿಗಳನ್ನು ಸದಸ್ಯ ಕಾರ್ಯದರ್ಶಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ ಬೆಂಗಳೂರು-560056 ವಿಳಾಸಕ್ಕೆ ದಿನಾಂಕ 20 ಮಾರ್ಚ್ 2026ರೊಳಗೆ ಕಳುಹಿಸಬಹುದು. ಇ-ಮೇಲ್ ಕೂಡ ಮಾಡಬಹುದು. ಅರ್ಜಿ ನಮೂನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಆಯ್ಕೆಯಾದವರು ಮೂರು ತಿಂಗಳ ಅವಧಿಯಲ್ಲಿ ಪೂರ್ಣಕಾಲಿಕವಾಗಿ ಪಾಲ್ಗೊಳ್ಳಬೇಕು. ಮಾಸಿಕ ಗೌರವಧನ, ಊಟ-ವಸತಿ ವ್ಯವಸ್ಥೆ ಇದೆ. ಮಾಹಿತಿಗೆ ನಿರ್ದೇಶಕ ಸಿ. ಬಸವಲಿಂಗಯ್ಯ 94485 38620 ಇವರನ್ನು ಸಂಪರ್ಕಿಸಬಹುದು.
