ಮಂಗಳೂರು : ತುಲುವೆರೆ ಕಲ ಟ್ರಸ್ಟ್ ಮಂಗಳೂರು ಇದರ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ತುಳು ಭಾಷೆಯಲ್ಲಿ ಸಾಹಿತ್ಯ ಬರೆಯಲು ಅವಕಾಶ ನೀಡಿದ್ದು, ಪ್ರಕಾರ : ಮಕ್ಕಳ ಗೀತೆ ಹಾಗೂ ಮಕ್ಕಳ ಕತೆಗಳನ್ನು ಆಹ್ವಾನಿಸುತ್ತಿದೆ. ಅತ್ಯುತ್ತಮ ಬರಹಕ್ಕೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಮೇ ತಿಂಗಳಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಗೌರವಿಸಲಾಗುವುದು. ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಗೀತೆ 12 ಸಾಲು, ಕತೆ 250 ಪದಗಳನ್ನು ಮೀರಿರಬಾರದು. ಯಾವುದೇ ಪ್ರದೇಶ, ವಯೋಮಾನದವರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು, ಬರಹಗಳು ಸ್ವರಚನೆಯಾಗಿರಬೇಕು. ಈವರೆಗೆ ಎಲ್ಲೂ ಪ್ರಕಟಗೊಂಡಿರಬಾರದು. ಬರಹಗಳನ್ನು ಅಶೋಕ ಎನ್. ಕಡೇಶಿವಾಲಯ-7760041895 ಅಥವಾ ವಿಶ್ವನಾಥ ಕುಲಾಲ್ ಮಿತ್ತೂರು-9900380301 ವಾಟ್ಯಾಪ್‌ಗೆ ದಿನಾಂಕ 31 ಮಾರ್ಚ್ 2026ರೊಳಗೆ ಕಳುಹಿಸಬಹುದು ಎಂದು ತುಲುವೆರೆ ಕಲ ಟ್ರಸ್ಟ್ ತಿಳಿಸಿದೆ.

