ಮಂಡ್ಯ : ಜಿಲ್ಲಾ ಯುವ ಬರಹಗಾರರ ಬಳಗದಿಂದ ಜಿಲ್ಲೆಯ ಹಿರಿಯ ಮತ್ತು ಕಿರಿಯ ಕವಯತ್ರಿಯರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಆಶಯದೊಂದಿಗೆ ಜಿಲ್ಲಾ ಮಟ್ಟದ ಮಹಿಳಾ ಮುಂಗಾರು ಕವಿಗೋಷ್ಠಿ ಆಯೋಜಿಸಲಾಗುತ್ತಿದ್ದು, ಆಸಕ್ತ ಕವಯತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಜಿಲ್ಲೆಯ ಯಾವುದೇ ವಯೋಮಾನದ ಕವಯತ್ರಿಯರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಯಾವುದೇ ವಸ್ತು ವಿಷಯ ಕುರಿತು ರಚಿಸಿರುವ 25 ಸಾಲುಗಳ ಮಿತಿಯಲ್ಲಿರುವ, ತಮ್ಮ ಎರಡು ಅತ್ಯತ್ತಮ ಸ್ವರಚಿತ ಕವನಗಳನ್ನು ಕಳುಹಿಸಿಕೊಡಬೇಕು. ಆಯ್ಕೆಯಾದ ಕವಯತ್ರಿರಿಗೆ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಯುವ ಕಾವ್ಯ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತ ಕವಯತ್ರಿಯರು ತಮ್ಮ ಕವನ, ಕಿರು ಪರಿಚಯದೊಂದಿಗೆ ದಿನಾಂಕ 10 ಜೂನ್ 2026ರೊಳಗೆ ತಲುಪುವಂತೆ ವಾಟ್ಸಾಫ್ ಸಂಖ್ಯೆ ಮೊ. -8317457397ಗೆ ಕಳುಹಿಸಿಕೊಡಬೇಕು. ಆಯ್ಕೆಯಾದ ಕವಯತ್ರಿಯರಿಗೆ ‘ಗುಣಸಾಗರಿ ನಾಗರಾಜು ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ-9880264678ಗೆ ಸಂಪರ್ಕಿಸಬಹುದು.
