ಉಡುಪಿ : ತುಳುಕೂಟವು ‘ಎಸ್.ಯು. ಪಣಿಯಾಡಿ’ ಪ್ರಶಸ್ತಿಗೆ ಬರಹಗಾರರಿಂದ ತುಳು ಕಾದಂಬರಿ ಹಸ್ತಪ್ರತಿಗಳನ್ನು ಆಹ್ವಾನಿಸಿದ್ದು, ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳುನಾಡ ಸಂಸ್ಕೃತಿ ಬಿಂಬಿಸುವ ಅಂಶಗಳಿಂದ ಕೂಡಿದ್ದು ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುಗಳನ್ನು ಆಧರಿಸಿರಬಹುದು.
ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರದ ಮತ್ತು ಮುದ್ರಣಗೊಳ್ಳದ ಸ್ವತಂತ್ರ ಕೃತಿಯ ಹಸ್ತಪ್ರತಿಗಳು ಇದಕ್ಕೆ ಅರ್ಹವಾಗಿದ್ದು, ಹಸ್ತಪ್ರತಿಯನ್ನು ಪ್ರಕಾಶ ಸುವರ್ಣ ಕಟಪಾಡಿ, ಯಶಸ್, ಕೋಟೆ ಬೀಡಿನ ಬಳಿ, ಕೋಟೆ ಗ್ರಾಮ ಕಟಪಾಡಿ ಅಂಚೆ, ಉಡುಪಿ ಜಿಲ್ಲೆ-574105 ಅವರಿಗೆ ದಿನಾಂಕ 30 ಏಪ್ರಿಲ್ 2026ರೊಳಗೆ ಕಳುಹಿಸಲು ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
