ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನವು ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. 2021ರಿಂದ 2026ರ ಅವಧಿಯಲ್ಲಿ ಪ್ರಕಟವಾದ ಕೃತಿಗಳ ಮೂರು ಪ್ರತಿಗಳನ್ನು ದಿನಾಂಕ 30 ಏಪ್ರಿಲ್ 2026ರೊಳಗೆ ಕಳುಹಿಸಬೇಕು. ವಿಳಾಸ: ಶಿವರಾಮ ಕಾರಂತ ಪ್ರತಿಷ್ಠಾನ, ಕನ್ನಡ ಭವನ , ಮೂಡುಬಿದಿರೆ – 574227’ (ದೂ: 9743533105).
ಉತ್ತಮ ಕೃತಿಗಳನ್ನು ಯಾರು ಬೇಕಾದರೂ ಶಿಫಾರಸು ಮಾಡಬಹುದು. ಹಿಂದೆ ಕಳುಹಿಸಿದ್ದ ಕೃತಿಗಳನ್ನು ಮತ್ತೆ ಕಳುಹಿಸಬೇಕಾಗಿಲ್ಲ. ಆಯ್ಕೆಯಾದ ಮೂರು ಕೃತಿಗಳಿಗೆ ತಲಾ ರೂ.ಹತ್ತು ಸಾವಿರ ಪುರಸ್ಕಾರ ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
