ಮೈಸೂರು : ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ನೀಡಲಾಗುವ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’ಗೆ ವೀರಶೈವ ಲಿಂಗಾಯತ ಧರ್ಮ, ಸಾಹಿತ್ಯ, ಇತಿಹಾಸ, ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಕೃತಿ ಆಹ್ವಾನಿಸಲಾಗಿದೆ. ಪ್ರಶಸ್ತಿಯು ಫಲಕ, ರೂ. ಇಪ್ಪತ್ತೈದು ಸಾವಿರ ನಗದು ಒಳಗೊಂಡಿದೆ.
ಲೇಖಕರು, ಪ್ರಕಾಶಕರು ದಿನಾಂಕ 31 ಮಾರ್ಚ್ 2026ರ ಒಳಗೆ ‘ನಿರ್ದೇಶಕರು, ಪ್ರಕಟಣೆ ವಿಭಾಗ, ಜೆ.ಎಸ್.ಎಸ್. ಮಹಾವಿದ್ಯಾಪೀಠ, ಜಗದ್ಗುರು ಶಿವರಾತ್ರಿ ರಾಜೇಂದ್ರ ವೃತ್ತ, ಮೈಸೂರು – 570004’ ಈ ವಿಳಾಸಕ್ಕೆ ಕೃತಿಗಳನ್ನು ಕಳುಹಿಸಬಹುದು.
