Subscribe to Updates

    Get the latest creative news from FooBar about art, design and business.

    What's Hot

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಹರಿಹರಪುರದಲ್ಲಿ ‘ಜಾಬಾಲಿ – ನಂದಿನಿ’ ಯಕ್ಷಗಾನ ತಾಳಮದ್ದಳೆ
    Yakshagana

    ಹರಿಹರಪುರದಲ್ಲಿ ‘ಜಾಬಾಲಿ – ನಂದಿನಿ’ ಯಕ್ಷಗಾನ ತಾಳಮದ್ದಳೆ

    February 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲ್ಲೂಕು ಹರಿಹರಪುರದಲ್ಲಿರುವ ಕಾಳನಾಯ್ಕನ ಕಟ್ಟೆ ಶ್ರೀ ರಕ್ತೇಶ್ವರಿ, ವರ್ತೆ ಪಂಜುರ್ಲಿ, ಮರ್ಲು ಚಿಕ್ಕು ದೇವಸ್ಥಾನದ 23ನೇ ವಾರ್ಷಿಕೋತ್ಸವವು ದಿನಾಂಕ 20 ಮತ್ತು 21 ಫೆಬ್ರುವರಿ 2026ರಂದು ಜರಗಿತು‌. ಈ ಸಂದರ್ಭದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ವಿಶೇಷ ತಾಳಮದ್ದಳೆ ಕೂಟವನ್ನು ಏರ್ಪಡಿಸಲಾಗಿತ್ತು. ಯಕ್ಷ ವೇದಿಕೆ ಹರಿಹರಪುರ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು.

    ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಿಂದ ಆಯ್ದ ‘ಜಾಬಾಲಿ – ನಂದಿನಿ’ ಆಖ್ಯಾನವನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಕಲಾವಿದರು ಪ್ರಸ್ತುತಪಡಿಸಿದರು. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಂದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಜಾಬಾಲಿ) ಮತ್ತು ವಿಜಯ ಶಂಕರ ಆಳ್ವ ಮಿತ್ತಳಿಕೆ (ನಂದಿನಿ) ಅರ್ಥಧಾರಿಗಳಾಗಿ ಭಾಗವಹಿಸಿದರು. ಉಳಿದ ಪಾತ್ರಗಳಲ್ಲಿ ಸ್ಥಳೀಯ ಕಲಾವಿದರಾದ ಅರವಿಂದ ಸೋಮಯಾಜಿ (ದೇವೇಂದ್ರ), ಕೆ.ಎಸ್. ಮಂಜುನಾಥ ಹರಿಹರಪುರ (ಶ್ರೀದೇವಿ) ಮತ್ತು ಶ್ರವಣಕುಮಾರ್ (ಪುರಜನರು) ಪಾಲ್ಗೊಂಡರು.

    ಹಿಮ್ಮೇಳದಲ್ಲಿ ಕಿಗ್ಗ ಹಿರಣ್ಣಾಚಾರ್ ಮತ್ತು ವೆಂಕಟರಮಣ ಮೂರ್ತಿ ಕೊಪ್ಪ ಭಾಗವತರಾಗಿದ್ದರು. ವೆಂಕಟೇಶ ಕೊಗ್ರೆ ಮದ್ದಳೆ ನುಡಿಸಿದರು. ಕಾರ್ಯಕ್ರಮ ಸಂಘಟಕರಾದ ಕೆ.ಎಸ್. ಮಂಜುನಾಥ ಶೇರಿಗಾರ್ ಹರಿಹರಪುರ ಸ್ವಾಗತಿಸಿ, ಕಲಾವಿದರನ್ನು ಗೌರವಿಸಿದರು. ಕ್ಷಮಿತ್ ರಾಜ್, ಪ್ರಶಾಂತ್ ಕುಮಾರ್ ಮತ್ತು ವಿಘ್ನೇಶ್ ಸಹಕರಿಸಿದರು. ಕಾಳನಾಯ್ಕನ ಕಟ್ಟೆ ರಕ್ತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಯಕ್ಷವೇದಿಕೆ ಹರಿಹರಪುರ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಲೆನಾಡಿನ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಆಸುಪಾಸಿನ ಹಲವು ಮಂದಿ ಕಲಾಸಕ್ತರು ಬಂದು ಸೇರಿದ್ದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’ರ ಆರನೇ ದಿನದ ಕಾರ್ಯಕ್ರಮ
    Next Article ನಾಟಕ ವಿಮರ್ಶೆ | ಮನರಂಜನಾತ್ಮಕ ಮಕ್ಕಳ ನಾಟಕ ‘ಬೆಳಗಿನ ಕನಸು’
    roovari

    Add Comment Cancel Reply


    Related Posts

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026

    ವಿಶೇಷ ಲೇಖನ | ಹವ್ಯಾಸಿ ರಂಗಭೂಮಿಯ ಅಪ್ರತಿಮ ಪ್ರತಿಭಾವಂತ ಕಲಾವಿದ ಆರ್.ಎಸ್. ರಾಜಾರಾಮ್

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.