Subscribe to Updates

    Get the latest creative news from FooBar about art, design and business.

    What's Hot

    ಸಾಂಪ್ರದಾಯಿಕ ಭಜನಾ ಸ್ಪರ್ಧೆಯಲ್ಲಿ ವಿಶ್ವಕರ್ಮ ಕಲಾ ಪರಿಷತ್ತಿನ ತಂಡ ಪ್ರಥಮ

    June 10, 2026

    ತುಳು ಭವನದಲ್ಲಿ ತುಳುವಿನಲ್ಲಿ ಕನಕದಾಸರ ಕಾವ್ಯ- ಕೀರ್ತನೆ ಸಂವಾದ | ಜೂನ್ 13

    June 10, 2026

    ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜೂನ್ 11

    June 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನಿರಂಜನ್ ಜೈನ್ ಕುದ್ಯಾಡಿ ವಿರಚಿತ ‘ಶಿಖರ್ಜಿಯಲ್ಲಿ ನಿರಂಜನನ ದರ್ಶನ’ ಮತ್ತು ‘ಜಿನಭಕ್ತಿ ಲಹರಿ’ ಕೃತಿ ಲೋಕಾರ್ಪಣೆ
    Book Release

    ನಿರಂಜನ್ ಜೈನ್ ಕುದ್ಯಾಡಿ ವಿರಚಿತ ‘ಶಿಖರ್ಜಿಯಲ್ಲಿ ನಿರಂಜನನ ದರ್ಶನ’ ಮತ್ತು ‘ಜಿನಭಕ್ತಿ ಲಹರಿ’ ಕೃತಿ ಲೋಕಾರ್ಪಣೆ

    November 6, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ ನಿರಂಜನ್ ಜೈನ್ ಕುದ್ಯಾಡಿ ಅವರು ರಚಿಸಿದ ‘ಶಿಖರ್ಜಿಯಲ್ಲಿ ನಿರಂಜನನ ದರ್ಶನ’ ಮತ್ತು ‘ಜಿನಭಕ್ತಿ ಲಹರಿ’ ಕೃತಿ ದಿನಾಂಕ 23-10-2023ರಂದು ಲೋಕಾರ್ಪಣೆಗೊಳಿಸಿದ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡುತ್ತಾ “ಒಂದು ಸಮುದಾಯದ ಒಳಗಿನ ವಿಚಾರಗಳ ಕುರಿತಾಗಿ ಪ್ರಕಟವಾಗುವ ಯಾವುದೇ ಪುಸ್ತಕಗಳು ಎಲ್ಲಾ ಸಮುದಾಯದವರಲ್ಲಿ ಕೊಡುಕೊಳ್ಳುವಿಕೆಗೆ ಒಳಗಾದಾಗ ಆ ಪುಸ್ತಕದ ಸಾರ್ಥಕತೆಯಾಗುತ್ತದೆ. ಒಂದು ಧರ್ಮ ಅಥವಾ ಸಮುದಾಯವನ್ನು ಮತ್ತೊಂದು ಧರ್ಮ ಪರಸ್ಪರ ಅರ್ಥ ಮಾಡಿಕೊಳ್ಳಬೇಕಾದರೆ ಪುಸ್ತಕಗಳ ಕೊಡುಕೊಳ್ಳುವಿಕೆಯ ಅಗತ್ಯವಿದೆ” ಎಂದು ಹೇಳಿದರು.

    ಕನ್ನಡ ಭಾಷಾ ಪಂಡಿತ ಬಿ.ಪಿ. ಸಂಪತ್ ಕುಮಾರ್ ಮೂಡುಬಿದಿರೆ ಕೃತಿಯನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾದ ಭಾರತೀಯ ಜೈನ್ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾ‌ರ್ ಶುಭಾಶಂಸನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪುಸ್ತಕದ ಪ್ರಕಾಶಕರೂ ಆಗಿರುವ ಬೆಂಗಳೂರಿನ ರತ್ನತ್ರಯ ಕ್ರಿಯೇಷನ್ಸ್ ಅದರ ಮುಖ್ಯಸ್ಥೆ ಡಾ. ನೀರಜಾ ನಾಗೇಂದ್ರ ಕುಮಾರ್ ಮಾತನಾಡುತ್ತಾ “ಈ ಕೃತಿಯಲ್ಲಿ ತುಳುನಾಡಿನ ಭಾಷೆಯ ಸೊಗಡು, ಅಲ್ಲಿನ ಜೀವನಾದರ್ಶಗಳ ದರ್ಶನ ಓದುಗರಿಗೆ ಲಭಿಸುತ್ತದೆ. ಈ ಕೃತಿಯನ್ನು ಓದಿದವರಿಗೆ ಶಿಖರ್ಜಿಯ ದರ್ಶನ ಮಾಡಲೇ ಬೇಕೆನ್ನುವಷ್ಟು ಭಕ್ತಿ ಭಾವ ಹುಟ್ಟುತ್ತದೆ” ಎಂದರು.

    ನ್ಯಾಯವಾದಿ ಶ್ವೇತ ಕೆ. ಕೃತಿಕಾರರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ನಿರಂಜನ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಖ್ಯಾತ ಗಾಯಕಿ ನಿರೀಕ್ಷಾ ಸನತ್ ಕುಮಾರ್ ಅವರು ನಿರಂಜನ್ ಜೈನ್ ರಚಿಸಿದ ಭಕ್ತಿಗೀತೆಯೊಂದನ್ನು ರಾಗ ಸಂಯೋಜಿಸಿ ಹಾಡಿದರು.

    ನಾರಾವಿ ಜೈನ ದಿಗಂಬರ ಬಸದಿ ಅಧ್ಯಕ್ಷ ನಿರಂಜನ್ ಜೈನ್, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜವರ್ಮ ಜೈನ್, ಭಾರತೀಯ ಜೈನ್ ಮಿಲನ್‌ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಜೈನ ಯುವಜನ ಸಂಘ ನಾರಾವಿ ಅಧ್ಯಕ್ಷ ಜಿನೇಂದ್ರ ಜೈನ್‌ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಕರಾಗಿ ವಸಂತ್ ಕುಮಾರ್ ಬಂಗ ಕಾರ್ಕಳ, ಉದ್ಯಮಿ ಸನತ್ ಕುಮಾರ್ ಹೊಸ್ಮಾರ್, ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ ಇದರ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ, ನ್ಯಾಯವಾದಿ ಶ್ವೇತಾ ಜೈನ್ ಮೂಡುಬಿದಿರೆ ಕಾರ್ಯನಿರ್ವಹಿಸಿದರು. ಅಧ್ಯಾಪಕ ಧರಣೇಂದ್ರ ಕಾರ್ಯಕ್ರಮ ನಿರೂಪಿಸಿ, ಶಶಿಕಲಾ ಕೆ. ಹೆಗ್ಡೆ ಕಾರ್ಕಳ ಸ್ವಾಗತಿಸಿ, ಲೇಖನ್ ಜೈನ್ ಪ್ರಾರ್ಥನೆ ಹಾಡಿದರು.

    ಕೃತಿಗಳು ಬೇಕಾದವರು ನಿರಂಜನ್ ಜೈನ್ ಕುದ್ಯಾಡಿ ಇವರನ್ನು ಸಂಪರ್ಕಿಸಬೇಕಾಗಿ ವಿನಂತಿ. ಒಂದು ಕೃತಿಗೆ ಕೇವಲ ₹ 100. (ಅಂಚೆ ವೆಚ್ಚ ಪ್ರತ್ಯೇಕ – ₹ 30). ಅತೀ ಕಡಿಮೆ ದರದಲ್ಲಿ (172 – page) ದೊರಕುವ ಈ ಕೃತಿಯನ್ನು ಕೊಂಡು ಓದಿ ಪ್ರೋತ್ಸಾಹಿಸಬೇಕಾಗಿ ವಿನಂತಿ. ಕೃತಿಗಳಿಗಾಗಿ ವಿಚಾರಿಸಿ (ನಿರಂಜನ್ ಜೈನ್ ಕುದ್ಯಾಡಿ) 9945563529

    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯ ವಿಜೇತರು
    Next Article ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಕನ್ನಡ ರಾಜ್ಯೋತ್ಸವ ಆಚರಣೆ 
    roovari

    Add Comment Cancel Reply


    Related Posts

    ತುಳು ಭವನದಲ್ಲಿ ತುಳುವಿನಲ್ಲಿ ಕನಕದಾಸರ ಕಾವ್ಯ- ಕೀರ್ತನೆ ಸಂವಾದ | ಜೂನ್ 13

    June 10, 2026

    ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜೂನ್ 11

    June 10, 2026

    ಕರಾವಳಿ ಮಹಿಳೆಯರಿಗಾಗಿ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 07

    June 10, 2026

    ‘ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ’ಕ್ಕೆ ಕೃತಿ ಆಯ್ಕೆ

    June 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.