ವಿಟ್ಲ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಸೂರಿಕುಮೇರು ಸಮೀಪದ ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಕದಂಬ ಕೌಶಿಕೆ’ ತಾಳಮದ್ದಳೆಯು ದಿನಾಂಕ 07 ಮಾರ್ಚ್ 2025ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್, ಪದ್ಯಾಣ ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭಾಸುರ), ಶುಭಾ ಅಡಿಗ (ರಕ್ತಬೀಜಾಸುರ), ಶುಭಾ ಗಣೇಶ್ ಮತ್ತು ಭಾರತಿ ರೈ ಅರಿಯಡ್ಕ (ಚಂಡ ಮುಂಡರು) ಸಹಕರಿಸಿದರು. ಸತತ ಇಪ್ಪತ್ತು ವರ್ಷಗಳಿಂದ ತಾಳಮದ್ದಳೆಯ ಪ್ರಾಯೋಜಕರಾಗಿ ಸಹಕರಿಸಿದ ಬೊಳುವಾರು ಬಾಬುರಾಯ್ ಹೋಟೇಲಿನ ಮಾಲಕರಾದ ಶ್ರೀಮತಿ ಮತ್ತು ಶ್ರೀ ಶಿವಾನಂದ ಪ್ರಭು ಹಾಗೂ ಶ್ರೀ ದೇವಳದ ಧರ್ಮದರ್ಶಿಗಳಾದ ಶ್ರೀ ರಾಖೇಶ್ ಪ್ರಭು ದಂಪತಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು.