ಮಂಗಳೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಸಂಸ್ಥೆಯ 30ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಶೀರ್ಷಿಕೆಯಲ್ಲಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -08’ ಪ್ರಸ್ತುತಿಯನ್ನು ದಿನಾಂಕ 09 ಏಪ್ರಿಲ್ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡ್, ಮೊದಲನೇ ಮಹಡಿ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪರಿಮಳ ಮಹೇಶ್ ರಾವ್ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದು, ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್ ಇವರ ಶಿಷ್ಯೆ ವಿದುಷಿ ಮಧುರಾ ಪ್ರಖ್ಯಾತ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

