ಮಂಗಳೂರು : ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ-ಕಂಬಳಬೆಟ್ಟು ಇದರ ವತಿಯಿಂದ ಮಕ್ಕಳ ‘ಕಲಾ ಕಣ್ಮಣಿ’ ಆನ್‌ಲೈನ್ ಭಾವಚಿತ್ರ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ರೂಪವಾಗಿ ಪ್ರಥಮ: ರೂ.2,001/-, ಕಲಾ ಕಣ್ಮಣಿ ಟ್ರೋಫಿ, ಪ್ರಶಸ್ತಿ ಪತ್ರ, ದ್ವಿತೀಯ: ರೂ.1,001/-, ಕಲಾ ಕಣ್ಮಣಿ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ತೃತೀಯ: ರೂ.501/-, ಕಲಾ ಕಣ್ಮಣಿ ಟ್ರೋಫಿ, ಪ್ರಶಸ್ತಿ ಪತ್ರ ಸಿಗಲಿದೆ.
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿದ್ದು, ಪ್ರವೇಶ ಶುಲ್ಕ: ರೂ.100/-, 10 ವಯಸ್ಸಿನ ಒಳಗಿನ ಮಕ್ಕಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕಳುಹಿಸುವ ಫೋಟೋ ಎಚ್.ಡಿ. ಕ್ವಾಲಿಟಿಯಲ್ಲಿರಬೇಕು. ಎಲ್ಲಾ ಫೋಟೋಗಳನ್ನು kalaa tapaswi ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಅಪ್ ಲೋಡ್ ಮಾಡಲಾಗುವುದು. ಫೋಟೋದೊಂದಿಗೆ ಸ್ಪರ್ಧಿಯ ಹೆಸರು, ವಯಸ್ಸು ಮತ್ತು ವಿಳಾಸ, ಆಧಾರ್ ಕಾರ್ಡ್ ಫೋಟೋ ಕಳುಹಿಸತಕ್ಕದ್ದು. ಸ್ಪರ್ಧೆಯಲ್ಲಿ ಒಟ್ಟು 5 ಸುತ್ತುಗಳು ಇರುತ್ತದೆ. ಮೊದಲ ಸುತ್ತಿನಲ್ಲಿ ಅತೀ ಹೆಚ್ಚು ಲೈಕ್ಸ್ ಬಂದ 16 ಮಕ್ಕಳ ಫೋಟೋಗಳು ಎರಡನೇ ಸುತ್ತಿಗೆ ತೇರ್ಗಡೆಯಾಗುತ್ತದೆ. ಸ್ಪರ್ಧಾಳುಗಳಿಗೆ ಈ-ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು. ಫೋಟೋಗಳಲ್ಲಿ ಫೇಕ್ ಲೈಕ್ಸ್ ಗಳು ಕಂಡುಬಂದಲ್ಲಿ ಸ್ಪರ್ಧೆಯಿಂದ ಹೊರಗಿಡಲಾಗುವುದು. ಫೋಟೋ ಕಳುಹಿಸಲು 13 ಏಪ್ರಿಲ್ 2026 ಕಡೆಯ ದಿನವಾಗಿರುತ್ತದೆ. ಲೈಕ್ ಪಡೆಯಲು 15 ಏಪ್ರಿಲ್ 2026 ಕೊನೆಯ ದಿನಾಂಕವಾಗಿದೆ. ಫೋಟೋವನ್ನು ಈ ನಂಬರ್‌ಗೆ ವಾಟ್ಸ್ ಆಪ್ ಮೂಲಕ ಕಳುಹಿಸತಕ್ಕದ್ದು. ದೂ. ಸಂಖ್ಯೆ: 7090615880. ಆಯೋಜಕರ ತೀರ್ಮಾನ ಅಂತಿಮ. ಹೆಚ್ಚಿನ ಮಾಹಿತಿಗಾಗಿ ಜೈದೀಪ್ ಅಮೈ 7090615880 ಇವರನ್ನು ಸಂಪರ್ಕಿಸಬಹುದು.
