ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದ ರಾಗ ಮಯೂರಿ ಅಕಾಡೆಮಿಯ ಸರಣಿ ಕಾರ್ಯಕ್ರಮವಾಗಿರುವ ‘ಕಲಾಯನ 10’ ದಿನಾಂಕ 06 ಜೂನ್ 2026ರಂದು ಸಹಾರ ಕನ್ವೆಂನ್ಷನ್ ಹಾಲ್ ನಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಪದ್ಮಾಕರ್ ಮಡಬೂರು ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶಂಖನಾದವನ್ನು ವಸುನಿತ, ನಿತ್ಯ ಪಂಚಾಂಗವನ್ನು ಸಾಧ್ವಿ, ಸ್ವಾಗತವನ್ನು ಅಪರ್ಣರವರು ಮಾಡಿದರು. ಭಾರತಿ ಅವರ ಪರಿಚಯವನ್ನು ದಿಶಾ, ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಅವರ ಪರಿಚಯವನ್ನು ಸ್ವಾತಿ, ವಿದುಷಿ ಪ್ರೀತಿ ಕಲಾ ಪುತ್ತೂರು ಇವರ ಪರಿಚಯವನ್ನು ನಾಗಶ್ರೀಯವರು, ವಿದ್ವಾನ್ ಪನ್ನಗ ಶರ್ಮನ್ ಅವರ ಪರಿಚಯವನ್ನು ಪುನರ್ವಿ, ವಿದ್ವಾನ್ ಮಧುಮುರುಳಿಯವರ ಪರಿಚಯವನ್ನು ದ್ವಿತಿಯವರು, ವಿದುಷಿ ಹರ್ಷಿತ ಕುಶಲಪ್ಪ ಇವರ ಪರಿಚಯವನ್ನು ಅನನ್ಯವರು, ವಿದುಷಿ ಅಂಕಿತ ಪ್ರಜ್ವಲ್ ಇವರ ಪರಿಚಯವನ್ನು ಹರ್ಷಿತ ಅವರು ನೆರವೇರಿಸಿದರು. ಹಾಗೂ ಈ ಕಾರ್ಯಕ್ರಮಕ್ಕೆ ರಚಿತಾ, ಇಂಚರ, ಮಿಸ್ಟಿ, ಆರಾಧ್ಯ ಕೆ.ಎಸ್., ಸಾಯಿ ಆರಾಧ್ಯ ಇವರು ಹೂವು ನೀಡಿ ಸ್ವಾಗತಿಸಿದರು.
ಭಾರತಿ ಪ್ರಭಾಕರ್ ಅವರು ಮಾತಾಡಿ “ಈ ತರಹದ ಸುಂದರವಾದ ಕಾರ್ಯಕ್ರಮವು ನೆರವೇರಿದ್ದು ಇಲ್ಲಿಯವರೆಗೂ ನೋಡಿರಲಿಲ್ಲ ಸಾಮಾನ್ಯವಾಗಿ ಭರತನಾಟ್ಯ ಕಾರ್ಯಕ್ರಮವು ಕ್ಯಾಸೆಟ್ ಮೂಲಕ ಮಾಡಲಾಗುತ್ತದೆ. ಆದರೆ ಇಂದು ನಾವು ಹಿಮ್ಮೇಳದೊಂದಿಗೆ ನೋಡಿರುವುದು ಬಹಳ ಸಂತೋಷ ತಂದಿದೆ. ವಿದುಷಿ ಪ್ರೀತಿಕಲಾ ಪುತ್ತೂರು ಇವರ ಗಾಯನ ಮಂತ್ರಮುಗ್ಧನಾಗಿಸಿದೆ, ನಟ್ವಂವಾಂಗ ವಯೋಲಿನ್ ಮತ್ತು ಮೃದಂಗ ಬಹಳ ಸುಂದರವಾಗಿತ್ತು. ಇನ್ನು ಈ ದಿನ ನೃತ್ಯ ಮಾಡಿರುವ ಅಂಕಿತಾ ಹಾಗೂ ಹರ್ಷಿತಾ ಇವರು ಬಹಳ ಅದ್ಭುತವಾಗಿ ಸತತವಾಗಿ ಎರಡೂವರೆ ಗಂಟೆಗಳ ಕಾಲ ನೃತ್ಯವನ್ನು ಮಾಡಿದ್ದಾರೆ. ಅವರ ಅಭಿನಯ ದೃತ್ಯದ ಶೈಲಿ ನಮ್ಮನ್ನು ಅಲುಗಾಡದೆ ಕಾರ್ಯಕ್ರಮವನ್ನು ನೋಡುವ ತರ ಮಾಡಿದ್ದಾರೆ. ಇಂತಹ ಕಲವಿದೆಯಾಗಿರುವಂತ ಅಂಕಿತಾ ನಮ್ಮೂರಿನ ಸೊಸೆಯಾಗಿ ಬಂದಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಹಿಂದೆ ಭರತನಾಟ್ಯ ಕಲಿಯುವುದು ಒಂದು ಕನಸಾಗಿತ್ತು. ಆದರೆ ಇಂದು ಇಂಥ ಪ್ರತಿಭೆ ನಮ್ಮೂರಿನಲ್ಲಿ ಇರುವುದು ನಮ್ಮೆಲ್ಲರ ಪುಣ್ಯ ಇಂತಹ ಪ್ರತಿಭೆಗೆ ನಾವೆಲ್ಲ ಸಹಕಾರ ಕೊಟ್ಟು ಬೆಳೆಸಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಪೇಕ್ಷ, ದಿಯಾ ಹಾಗೂ ಪೋಷಕರಾದ ಅನುಪಮ, ಉಷಾ, ಸುನಿತ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಅವರು ಮಾತನಾಡಿ “ಎನ್.ಎಲ್. ಪುರದ ಮಕ್ಕಳು ಕಲೆ ಸಂಸ್ಕೃತಿಯಲ್ಲಿ ತುಂಬಾ ಮೇಲಿದ್ದಾರೆ. ಸಾಮಾನ್ಯವಾಗಿ ಎರಡೂವರೆ ಗಂಟೆಗಳ ಕಾಲ ಕುಳಿತಲ್ಲಿ ಕುಳಿತು ಕಾರ್ಯಕ್ರಮವನ್ನು ನೋಡುವುದು ಬಹಳ ಕಷ್ಟ. ಆದರೆ ನಮ್ಮ ಎನ್.ಆರ್. ಪುರದ ಮೂರು ವರ್ಷದ ಮಕ್ಕಳಿಂದ ಹಿಡಿದು ಎಲ್ಲಾ ಪೋಷಕರು ಮಕ್ಕಳು ಎಲ್ಲೂ ಅಲ್ಲಾಡದೆ ನಿಶಬ್ದವಾಗಿ ಕಾರ್ಯಕ್ರಮವನ್ನು ನೋಡಿರುವುದು ಬಹಳ ಸಂತೋಷ ತಂದಿದೆ. ಈ ತರಹ ಕಲೆಯನ್ನು ನೋಡುವುದು ಪ್ರೋತ್ಸಾಹಿಸುವುದು ಎಲ್ಲಾ ಜನರಲ್ಲಿ ಬೆಳೆಯಬೇಕು. ಇಂದು ಈ ಕಾರ್ಯಕ್ರಮಕ್ಕೆ ಬಹಳ ಸುಂದರವಾದ ಮೂಡಿ ಬಂದಿದೆ” ಎಂದರು.






ಈ ಕಾರ್ಯಕ್ರಮವನ್ನು ಹಿಮ್ಮೇಳದೊಂದಿಗೆ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ನಟವಾಂಗಕ್ಕೆ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ ಪುತ್ತೂರು, ಮೃದಂಗದಲ್ಲಿ ವಿದ್ವಾನ್ ಪನ್ನಗ ಶರ್ಮನ್ ಶೃಂಗೇರಿ, ಪಿಟೀಲಿನಲ್ಲಿ ವಿದ್ವಾನ್ ಮಧುಮುರುಳಿ ಶಿವಮೊಗ್ಗ ಇವರುಗಳಿದ್ದರು. ಈ ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುವಂತಹ ವಿದುಷಿ ಅಂಕಿತ ಪ್ರಜ್ವಲ್ ಮತ್ತು ವಿದುಷಿ ಹರ್ಷಿತಾ ಕುಶಾಲಪ್ಪ ದೆಹಲಿ ಬಹಳ ಅದ್ಭುತವಾಗಿ ಎರಡೂವರೆ ಗಂಟೆಗಳ ಕಾಲ ನೃತ್ಯವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ರಾಗಮಯೂರಿ ಅಕಾಡೆಮಿಯ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಗಾನವಿಯವರು ಮಾಡಿದರು, ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ರಾಗಮಯೂರಿ ಅಕಾಡೆಮಿಯ ಕಾರ್ಯದರ್ಶಿಗಳಾದ ಶ್ರೀಯುತ ಪ್ರಜ್ವಲ್ ಅವರು ನೆರವೇರಿಸಿದರು.



