ಉಡುಪಿ : ಮಾಸ್ಟರ್ ಡ್ರಾಮಾ ಆರ್ಟ್ಸ್ (ರಿ.) ಶಿರಿಬೀಡು ಬನ್ನಂಜೆ ಉಡುಪಿ ಇದರ 14ನೇ ವಾರ್ಷಿಕೋತ್ಸವ ಪ್ರಯುಕ್ತ ‘ಕಲೋತ್ಸವ 2026’ ನೃತ್ಯ ವೈವಿಧ್ಯ ಕಾರ್ಯಕ್ರಮವನ್ನು ದಿನಾಂಕ 26 ಏಪ್ರಿಲ್ 2026ರಂದು ಸಂಜೆ 4-00 ಗಂಟೆಗೆ ಉಡುಪಿ ಶಾರದಾ ಮಂಟಪ ರಸ್ತೆಯಲ್ಲಿರುವ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಮತ್ತು ರಂಜಿತ್ ಶೆಟ್ಟಿ ಕುಕ್ಕುಡೆ ಇವರ ನಿರ್ದೇಶನದಲ್ಲಿ ‘ಪುಚ್ಚೇಲಿ’ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ.

