ಮೈಸೂರು : ಎಕ್ಸ್ಪೀರಿಯನ್ಸ್ ಮೈಸೂರು ಇವರ ವತಿಯಿಂದ ಹಾಗೂ ನಟನ ರಂಗಶಾಲೆ, ಎ.ಎಸ್.ಕೆ. ಮೈಸೂರು ಮತ್ತು ಯಂಗ್ ಇಂಡಿಯನ್ಸ್ ಇವರ ಸಹಯೋಗದಲ್ಲಿ ‘ಕಣಿವೆಯ ಹಾಡು’ ನಾಟಕ ಪ್ರದರ್ಶನವನ್ನು ದಿನಾಂಕ 27 ಜೂನ್ 2026ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕದ ಮೂಲ ರಚನೆ ಅತೋಲ್ ಫ್ಯೂಗಾರ್ಡ್ ಇವರದ್ದು, ಕನ್ನಡಕ್ಕೆ ಡಾ. ಮೀರಾ ಮೂರ್ತಿ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರು ಸಂಗೀತ ನೀಡಿದ್ದು, ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.

