Subscribe to Updates

    Get the latest creative news from FooBar about art, design and business.

    What's Hot

    ಮುಂಬಯಿ ಯಕ್ಷಗಾನ ಸಮ್ಮೇಳನ 2026 ಇವರ ಸಮ್ಮೇಳನಾಧ್ಯಕ್ಷರಾಗಿ ಡಾ. ಟಿ. ಶ್ಯಾಮ ಭಟ್ ಆಯ್ಕೆ

    May 11, 2026

    ‘ಕಾವ್ಯಾಂ ವ್ಹಾಳೊ- 14’ ಕೊಂಕಣಿ ಕವಿಗೋಷ್ಠಿ

    May 11, 2026

    ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಆಂಧ್ರದ ಕಲಾತಂಡಗಳ ನೃತ್ಯ ಸೇವೆ

    May 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಡಾ. ಪುರುಷೋತ್ತಮ್ ಬಿಳಿಮಲೆ ಇವರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’
    Awards

    ಡಾ. ಪುರುಷೋತ್ತಮ್ ಬಿಳಿಮಲೆ ಇವರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’

    June 14, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತಮ ಬಿಳಿಮಲೆ ಯವರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನದ ಪ್ರತಿಷ್ಠಿತ ಅಂತರ್ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ” ಪ್ರದಾನ ಸಮಾರಂಭ ದಿನಾಂಕ 24 ಜೂನ್ 2025ರಂದು ನಡೆಯಿತು. ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ದಂಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು.

    ಕಾಸರಗೋಡಿನ ಏತಡ್ಕ ನಾರಾಯಣ ಅಲೆವೂರಾಯರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಶ್ರೀ ಎ. ಆರ್. ಸುಬ್ಬಯ್ಯಕಟ್ಟೆ ಮಾತನಾಡಿ “ಕಾಸರಗೋಡು ಪ್ರದೇಶದ ಕನ್ನಡಿಗರ ಅತಿತ್ಯ, ಗೌರವ ಭಾವಕ್ಕೆ ಶರಣು. ಇಲ್ಲಿಯವರು ತೋರುವ ಪ್ರೀತಿ, ಆದರಗಳು ಆದರಣೀಯ. ಕಾಸರಗೋಡು ಕನ್ನಡಿಗರು ಅನುಭವಿಸುತ್ತಿರುವ ಕನ್ನಡಪರ ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ನಾನು ಪ್ರಾಧಿಕಾರದ ಸೀಮಿತ ಪರಿದಿಗೂ ಮೀರಿ ಸಹಾಯ ಸಹಕಾರಗಳನ್ನು ಮಾಡಲು ಪ್ರಯತ್ನಿಸುವೆ” ಎಂದರು.

    ಪ್ರೊ. ಎ. ಶ್ರೀನಾಥ್ ಇವರು ಬಿಳಿಮಲೆಯವರ ವ್ಯಕ್ತಿ ಸಾಧನೆ ಪರಿಚಯ ನೀಡಿದರು. ಮುಖ್ಯ ಅತಿಥಿಯಾಗಿ ಡಾ. ನವೀನ್ ಕುಲಮರ್ವ, ಪತ್ರಕರ್ತ ಪುರುಷೋತ್ತಮ್ ಭಟ್, ಪತ್ರಕರ್ತ ಪುರುಷೋತ್ತಮ ಪೆರ್ಲ, ಮಾತನಾಡಿದರು. ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ ಇದರ ಉಪಾಧ್ಯಕ್ಷರಾದ ನರಸಿಂಹ ಭಟ್ ಏತಡ್ಕ ಶಾಲು ಹೊದಿಸಿ, ಪ್ರೊ. ಎ. ಶ್ರೀನಾಥ್ ಹಾರ ತೊಡಿಸಿ, ಸಂದ್ಯಾ ರಾಣಿ ಟೀಚರ್ ಸ್ಮರಣಿಕೆ ನೀಡಿ, ವಾಮನ್ ರಾವ್ ಬೇಕಲ್ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಿದರು.
    ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಪುರುಷೋತ್ತಮ್ ಭಟ್ ಕಾರ್ಯಕ್ರಮ ನಿರ್ವಹಿಸಿ, ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.

     

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನಲ್ಲಿ ರಾಜ್ಯಮಟ್ಟದ ‘ಕನ್ನಡ ಜಾನಪದ ಸಮ್ಮೇಳನ’ದಲ್ಲಿ ಜಾನಪದ ಸ್ಪರ್ಧೆ | ಕೊನೆಯ ದಿನಾಂಕ ಜೂನ್ 25
    Next Article ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ
    roovari

    Add Comment Cancel Reply


    Related Posts

    ಮುಂಬಯಿ ಯಕ್ಷಗಾನ ಸಮ್ಮೇಳನ 2026 ಇವರ ಸಮ್ಮೇಳನಾಧ್ಯಕ್ಷರಾಗಿ ಡಾ. ಟಿ. ಶ್ಯಾಮ ಭಟ್ ಆಯ್ಕೆ

    May 11, 2026

    ‘ಕಾವ್ಯಾಂ ವ್ಹಾಳೊ- 14’ ಕೊಂಕಣಿ ಕವಿಗೋಷ್ಠಿ

    May 11, 2026

    ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಆಂಧ್ರದ ಕಲಾತಂಡಗಳ ನೃತ್ಯ ಸೇವೆ

    May 11, 2026

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ರಂಗ ನಮನ’

    May 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.