ಮಂಗಳೂರು : ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಕವಿ ಮನದವರಿಗೆ ‘ಕನ್ನಡದ ಕಂಪು ಸರಣಿ -8’ ಮಾಲಿಕೆಯ ಅಡಿಯಲ್ಲಿ ಆಧುನಿಕ ಸರ್ವಜ್ಞ ಡಾ. ಡಿ.ವಿ. ಗುಂಡಪ್ಪ ಇವರ ಎರಡು ಕವನಗಳ ವಾಚನ ಮತ್ತು ವಿಚಾರ ಸಂಕಿರಣವನ್ನು ದಿನಾಂಕ 03 ಏಪ್ರಿಲ್ 2026ರಂದು ಸಂಜೆ 3-00 ಗಂಟೆಗೆ ಮಂಗಳೂರು ಪಬ್ಬಾಸ್ ಪಕ್ಕ ಲಾಲ್ ಭಾಗ್ ಬಸ್ ನಿಲ್ದಾಣ ಹೌಸ್ ಆಫ್ ಗುರುದೇವ ಲಕ್ಷ್ಮಿ ಶೇಷಾ ಅಪಾರ್ಟ್ಮೆಂಟ್ ಹಿಂದೆ ಆಯೋಜಿಲಾಗಿದೆ.
ಕವಿಗಳಾದ ಡಾ. ಸುರೇಶ್ ನೆಗಳಗುಳಿ, ಉಮೇಶ್ ಕಾರಂತ್, ಜಯಶ್ರೀ ಶೆಣೈ, ಅನುರಾಧ ರಾಜೀವ್, ಸುಲೋಚನಾ ನವೀನ್, ದಿವ್ಯಾ ಗಿರೀಶ್, ಅರುಣ್ ನಾಗರಾಜ್, ಆಕೃತಿ ಐ.ಎಸ್. ಭಟ್, ಆರ್.ಎಮ್. ಗೋಗೇರಿ, ಅನಿತಾ ಶೆಣೈ, ನಿರೀಕ್ಷಿತಾ, ಕಸ್ತೂರಿ ಜಯರಾಮ್, ಡಾ. ಕೆ. ಗೋವಿಂದ, ಸುರೇಖಾ ಸುದೇಶ್ ರಾವ್, ಮೂಗಪ್ಪ ಗಾಳೇರಾ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

