ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕ ಸಂಘದ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಡಾ. ಶಿವರಾಮ ಕಾರಂತ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ.
ಲೇಖನ ಕನಿಷ್ಠ 3 ಪುಟ ಗರಿಷ್ಠ 6 ಪುಟ ಮೀರಿರಬಾರದು. ಲೇಖನವನ್ನು ಬರೆದು ಇಲ್ಲವೇ ಟೈಪ್ ಮಾಡಿ ಕಳುಹಿಸಬಹುದು. ‘ಡಾ. ಶಿವರಾಮ ಕಾರಂತರ ಬರಹಗಳು: ನಾನು ಕಂಡಂತೆ’ ಅಥವಾ ‘ನನ್ನ ನೆಚ್ಚಿನ ಸಾಹಿತಿ’ ವಿಷಯದ ಬಗ್ಗೆ ಲೇಖನ ಬರೆಯಬಹುದು. ದಿನಾಂಕ 20 ಮಾರ್ಚ್ 2026ರೊಳಗೆ ಕೆ. ಮುರಳೀಧರ, ಶ್ರೀ ಕೃಷ್ಣ ಅಮ್ಮ ಲೇಔಟ್, ಕನ್ನರ್ಪಾಡಿ, ಕಡೆಕಾರು ಅಂಚೆ ಉಡುಪಿ-576 103 ಈ ವಿಳಾಸಕ್ಕೆ ಕಳಿಸಬೇಕು ಎಂದು ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
