Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಮತ್ತು ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟ
    Awards

    ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಮತ್ತು ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟ

    April 2, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ವರ್ಷದ ‘ಗೌರವ ಪ್ರಶಸ್ತಿ’ ಮತ್ತು ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು, ಐವರು ವರ್ಷದ ‘ಗೌರವ ಪ್ರಶಸ್ತಿ’ಗೆ ಮತ್ತು 10 ಮಂದಿ ವರ್ಷದ ‘ಸಾಹಿತ್ಯಶ್ರೀ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್ ತಿಳಿಸಿದ್ದಾರೆ.

    ಪ್ರೊ. ಶಿವರಾಮಯ್ಯ (ಬೆಂಗಳೂರು), ಚಂದ್ರಶೇಖರ ತಾಳ್ಯ (ಚಿತ್ರದುರ್ಗ), ಡಾ. ಚಂದ್ರಕಾಂತ ಪೋಕಳೆ (ಬೆಳಗಾವಿ), ಡಾ. ವಸುಂಧರಾ ಭೂಪತಿ (ಬಳ್ಳಾರಿ), ಡಾ. ಎಸ್. ತುಕಾರಾಂ (ಮೈಸೂರು) ಅವರು 2025ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 60 ವರ್ಷ ಮೇಲ್ಪಟ್ಟ ಹಿರಿಯ ಲೇಖಕರಿಗೆ ಕೊಡಲಾಗುತ್ತಿರುವ ಗೌರವ ಪ್ರಶಸ್ತಿಯು ತಲಾ ರೂ. ಐವತ್ತು ಸಾವಿರ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ ಒಳಗೊಂಡಿರಲಿದೆ.

    2025ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಡಾ. ನಿಷ್ಠಿ ರುದ್ರಪ್ಪ (ಬಳ್ಳಾರಿ), ಡಾ. ವೀರೇಶ ಬಡಿಗೇರ (ಬಾಗಲಕೋಟೆ), ಡಾ. ಸಿ.ಜಿ. ಲಕ್ಷ್ಮೀಪತಿ (ಚಿತ್ರದುರ್ಗ), ಕಂನಾಡಿಗ ನಾರಾಯಣ (ಬೆಂಗಳೂರು), ಡಾ. ಜ್ಯೋತಿ (ಬೆಂಗಳೂರು), ರೂಪಾ ಹಾಸನ (ಹಾಸನ), ಜಯರಾಮ್ ರಾಯಪುರ (ವಿಜಯವಾಡ), ಕುಮುದಾ ಸುಶೀಲ್ (ದಾವಣಗೆರೆ), ಡಾ. ಓ. ನಾಗರಾಜು (ತುಮಕೂರು), ಬಿ.ಎಂ. ಬಷೀರ್ (ಮಂಗಳೂರು) ಆಯ್ಕೆಯಾಗಿದ್ದಾರೆ. 50ರಿಂದ 60 ವರ್ಷದೊಳಗಿನ ಲೇಖಕರಿಗೆ ಕೊಡಲಾಗುತ್ತಿರುವ ಈ ಪ್ರಶಸ್ತಿಯು ತಲಾ ರೂ. ಇಪ್ಪತ್ತೈದು ಸಾವಿರ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ ಒಳಗೊಂಡಿರಲಿದೆ.

    2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ವಿಮರ್ಶಕರ ಅಭಿಪ್ರಾಯ ಆಧರಿಸಿ 17 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಬಹುಮಾನವು ತಲಾ ರೂ. ಇಪ್ಪತ್ತೈದು ಸಾವಿರ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ ಒಳಗೊಂಡಿರಲಿದೆ. ಭಾರತೀದೇವಿ ಪಿ. (ಕೃತಿ: ಚಲಿಸುತ್ತಿವೆ ಚುಕ್ಕಿಗಳು, ಪ್ರಕಾರ: ಕಾವ್ಯ), ಶಶಿ ತರೀಕೆರೆ (ಪ್ಯೂಪಾ, ನವಕವಿಗಳ ಪ್ರಥಮ ಸಂಕಲನ), ವೈ.ಎಸ್. ಹರಗಿ (ಇಮಾಮ್ ಸಾಹೇಬರ ಕುದುರೆ, ಕಾದಂಬರಿ), ಅನಿಲ್ ಗುನ್ನಾಪೂರ (ಸರ್ವೆ ನಂಬರ್-97, ಸಣ್ಣಕತೆ), ಡಾ. ಚಂದ್ರು ಕಾಳೇನಹಳ್ಳಿ (ಗಂಧವತಿ, ನಾಟಕ), ಡಾ. ಶಿವರಾಜ ಬ್ಯಾಡರಹಳ್ಳಿ (ಒಂದು ತಲೆ ಚವುರದ ಕಥೆ, ಲಲಿತ ಪ್ರಬಂಧ), ಮಲ್ಲಿಕಾರ್ಜುನ ಹುಲಗಬಾಳಿ (ತಿರುಗಾಟ, ಪ್ರವಾಸ ಸಾಹಿತ್ಯ), ಎಂ.ಜಿ. ಹೆಗಡೆ (ಚಿಮಣಿ ಬೆಳಕಿನಿಂದ, ಜೀವನ ಚರಿತ್ರೆ/ಆತ್ಮಕಥೆ), ಮಹಾಂತೇಶ ಪಾಟೀಲ (ಬೆಳಕು ಬೆಳೆಯುವ ಹೊತ್ತು, ಸಾಹಿತ್ಯ ವಿಮರ್ಶೆ), ರಾಜಶೇಖರ ಕುಕ್ಕುಂದಾ (ಬಿಸಿ ಬಿಸಿ ಬಾತು, ಮಕ್ಕಳ ಸಾಹಿತ್ಯ), ಶ್ರೀಧರ ತುಮರಿ (ಪಕ್ಷಿಗಳ ವಿಸ್ಮಯ ವಿಶ್ವ, ವಿಜ್ಞಾನ ಸಾಹಿತ್ಯ), ಡಾ. ಎನ್.ಎನ್. ಚಿಕ್ಕಮಾದು (ಪ್ರಜಾಮಾತೆ, ಮಾನವಿಕ), ಡಾ. ಹಂಪನಹಳ್ಳಿ ತಿಮ್ಮೇಗೌಡ (ದಾಸೊಕ್ಕಲಿಗರು, ಗ್ರಂಥ ಸಂಪಾದನೆ/ಸಂಶೋಧನೆ), ದು. ಸರಸ್ವತಿ (ಜಾತಿ ಮತ್ತು ಲಿಂಗತ್ಯ : ಅನುವಾದ), ಡಾ. ಹುಲಿಕುಂಟೆ ಮೂರ್ತಿ (ನುಡಿ ಕಂಡಾಯ, ವೈಚಾರಿಕ/ಅಂಕಣ ಬರಹ), ಲಕ್ಷ್ಮಣ ಶರೆಗಾರ (ತಿದಿಯ ತುದಿಗೆ ಬೆಂಕಿಯ ಉಗುಳು, ಮೊದಲ ಸ್ವತಂತ್ರ ಕೃತಿ), ಡಾ. ಪ್ರದೀಪ್ ಕೆಂಜಿಗೆ (ನರವಾನರ, ಸಂಕೀರ್ಣ) ಇವರು ಆಯ್ಕೆಯಾಗಿದ್ದಾರೆ.

    2024ನೇ ಸಾಲಿನ ಅಕಾಡೆಮಿಯ ದತ್ತಿ ಬಹುಮಾನ ಪುರಸ್ಕಾರಕ್ಕೆ ಪ್ರೇಮಕುಮಾರ್ ಹರಿಯಬ್ಬೆ (ಕೃತಿ: ಬಹುರೂಪಿ, ಪ್ರಕಾರ: ಕಾದಂಬರಿ, ದತ್ತಿ: ಚದುರಂಗ), ಕಡಿದಾಳ್ ಪ್ರಕಾಶ್ (ನನ್ನೂರಿನ ಶ್ರೀಸಾಮಾನ್ಯರು, ಲಲಿತ ಪ್ರಬಂಧ, ವಿ. ಸೀತಾರಾಮಯ್ಯ ಸೋದರಿ ಇಂದಿರಾ), ನ್ಯಾ. ಶಿವರಾಜ ವಿ. ಪಾಟೀಲ (ಕಳೆದ ಕಾಲ ನಡೆದ ದೂರ, ಜೀವನ ಚರಿತ್ರೆ, ಸಿಂಪಿ ಲಿಂಗಣ್ಣ), ಡಾ. ಎಚ್. ಲಕ್ಷ್ಮೀನಾರಾಯಣಸ್ವಾಮಿ (ಒಳಮೀಸಲಾತಿ ಮತ್ತು ಇತರೆ ಲೇಖನಗಳು, ಸಾಹಿತ್ಯ ವಿಮರ್ಶೆ, ಪಿ. ಶ್ರೀನಿವಾಸರಾವ್), ಅಭಿಷೇಕ ಬಳೆ ಮಸರಕಲ್ (ಆಕೆ ಒಂದು ಹೂವು ಮತ್ತು ಹಿಡಿ ಮಣ್ಣು, ಕಾವ್ಯ ಹಸ್ತಪ್ರತಿ, ಚಿ. ಶ್ರೀನಿವಾಸರಾಜು), ಕಾರ್ತಿಕ್ ಆರ್. (ಸತ್ತವರ ಸೊಲ್ಲು, ಅನುವಾದ, ಎಲ್. ಗುಂಡಪ್ಪ ಮತ್ತು ಶಾರದಮ್ಮ), ಶೈಲಜಾ ಅಶ್ವತ್ ಕೋಲಾರ (ರಾಕ್ಷಸರ ನಡುವೆ ಪಯಣ, ಲೇಖಕರ ಮೊದಲ ಸ್ವತಂತ್ರ ಕೃತಿ, ಮಧುರಚೆನ್ನ), ಎ.ಎಸ್. ಪುತ್ತಿಗೆ (ವಾರ್ತಾಭಾರತಿ ಸಂಪಾದಕೀಯ, ವೈಚಾರಿಕ/ಅಂಕಣ ಬರಹ, ಬಿ.ವಿ. ವೀರಭದ್ರಪ್ಪ), ವನಮಾಲಾ ವಿಶ್ವನಾಥ (ಕುವೆಂಪು ಬೈಡ್ ಇನ್ ದ ಹಿಲ್ಸ್, ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದ. ಅಮೆರಿಕನ್ನಡ), ಡಾ. ಕಬ್ಬಿನಾಲೆ ವಸಂತ ಭಾರದ್ವಾಜ (ಹರಿದಾಸರ ಮುಂಡಿಗೆಗಳು, ದಾಸ ಸಾಹಿತ್ಯ, ಜಲಜಾ ಶ್ರೀಪತಿ ಆಚಾರ್ಯ ಗಂಗೂರ್), ಯು. ಸಿರಾಜ್ ಅಹಮದ್ (ನೆಲ ನುಡಿದ ನಾದ. ಗಜಲ್ ಕಾವ್ಯ, ಡಾ. ಶಾಂತರಸ ಗಜಲ್ ಕಾವ್ಯ) ಇವರು ಆಯ್ಕೆಯಾಗಿದ್ದಾರೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹದಲ್ಲಿ ಮನಮೋಹಕ ನೃತ್ಯ ರೂಪಕ
    Next Article ಸೌಹಾರ್ದ ಸಾಹಿತ್ಯ ವೇದಿಕೆ ಮಂಗಳೂರು ಘಟಕದಿಂದ ‘ಕನ್ನಡದ ಕಂಪು ಸರಣಿ -8’ | ಏಪ್ರಿಲ್ 3
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.