Subscribe to Updates

    Get the latest creative news from FooBar about art, design and business.

    What's Hot

    ಚಂದ್ರಹಾಸ ಕಣಂತೂರು ಇವರ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ. ಆಳ್ವೆರ್ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 13

    September 12, 2026

    ಪುಸ್ತಕ ವಿಮರ್ಶೆ | ಮಹಾಕವಿ ಭಾಸನ ‘ಕರ್ಣಭಾರ’ ಏಕಾಂಕ ನಾಟಕ

    September 12, 2026

    ಜಿಲ್ಲಾ ಮಟ್ಟದ ದೇಶಭಕ್ತಿ ಮತ್ತು ಜನಪದ ಗೀತಗಾಯನ ಸ್ವರ್ಧೆ | ಸೆಪ್ಟೆಂಬರ್ 18

    September 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದಿಂದ ಕಟೇಲಿನಲ್ಲಿ ಹಿರೇಮಗಳೂರು ಕಣ್ಣನ್ ಜೊತೆ ಹರಟೆ 
    Literature

    ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದಿಂದ ಕಟೇಲಿನಲ್ಲಿ ಹಿರೇಮಗಳೂರು ಕಣ್ಣನ್ ಜೊತೆ ಹರಟೆ 

    September 16, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಟೀಲು : ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ವತಿಯಿಂದ ಹಿರೇಮಗಳೂರು ಕಣ್ಣನ್ ಜೊತೆ ಹರಟೆ ಕಾರ್ಯಕ್ರಮವು ದಿನಾಂಕ 10-09-2023ರ ಭಾನುವಾರದಂದು ಕಟೇಲಿನಲ್ಲಿ ನಡೆಯಿತು.

    ‘ಕನ್ನಡದ ಪೂಜಾರಿ’ ಖ್ಯಾತಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ “ಭಾರತ ದೇಶದ ಮಣ್ಣಿನ ಗುಣ ಶ್ರೇಷ್ಟವಾದುದು. ಜಗತ್ತಿಗೇ ಮಾರ್ಗದರ್ಶನ ಮಾಡಿದ ಸನಾತನ ಧರ್ಮದ ಮೇಲೆ ಪೆಟ್ಟು ಕೊಡುವ ಕೆಲಸ ಸರಿಯಾದುದಲ್ಲ. ಇಸ್ರೇಲ್ ನಿಂದ ನಮ್ಮೂರಿಗೆ ಸಂಸ್ಕೃತ ಕಲಿಯಲು ಬಂದವರು ನಾವು ಜ್ಞಾನ ಸಂಪಾದನೆಗಾಗಿ ಬಂದಿದ್ದೇವೆ ಎಂದಿದ್ದರು. ದ್ವೈತ, ಆದ್ವೈತ, ವಿಶಿಷ್ಟಾದ್ವೈತ ಸಿದ್ದಾಂತಗಳು ರಾದ್ದಾಂತಗಳಾಗಬಾರದು ಎಂದ ಕಣ್ಣನ್ ಇತ್ತೀಚಿಗೆ ನಮ್ಮ ಮನೆಯ  ನಾಗರಿಕ ಸಂಸ್ಕೃತಿ ಹೇಗಿದೆಯೆಂದರೆ ಪದ್ಮಾವತಿ ನಿಲಯ ವೆಂಕಟೇಶ್ವರ ಪ್ರಸನ್ನ ತಂದೆ ತಾಯಿಯ ಅಶೀರ್ವಾದ ಎಂದೆಲ್ಲ ಹಾಕಿ “ನಾಯಿಗಳಿವೆ ಎಚ್ಚರಿಕೆ” ಎಂಬ ಅಪಸಂಸ್ಕೃತಿ ಬೋರ್ಡನ್ನೂ ನೇತು ಹಾಕುತ್ತೇವೆ. ಮುದ್ದಣ ಮನೋರಮೆಯರ ಸಾಹಿತ್ಯ ಬರೆದ ಕವಿ ಕಷ್ಟದಲ್ಲಿದ್ದ. ಆದರೆ ಅಂತಹ ಶ್ರೇಷ್ಟ ಸಾಹಿತ್ಯವನ್ನು ಮುಂದಿಟ್ಟು ಡಾಕ್ಟರೇಟ್ ಮಾಡಿದವರು ಎಷ್ಟೋ ಮಂದಿ ಇದ್ದಾರೆ. ಮುಳಿಯ ತಿಮ್ಮಪ್ಪಯ್ಯ, ಡಿವಿಜಿ ಮತ್ತು  ಹುಯಿಳಗೋಳ ಹೀಗೆ ಸಾಹಿತ್ಯಕ್ಕಾಗಿ ಕನ್ನಡಕ್ಕಾಗಿ ಕೆಲಸ ಮಾಡದವರಿಲ್ಲ. ಆದರೆ ಅವರ ಕಾರ್ಯಗಳು ಅನುಪಮ ಸ್ಮರಣೀಯ ಎಂದರು. ಕನ್ನಡದ ಓದು ಬಳಕೆ ನಿರಂತರವಾಗಿರುವಂತೆ ಮಕ್ಕಳನ್ನು ಪ್ರೇರೇಪಿಸಬೇಕು” ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಹಿರೇಮಗಳೂರು ಕಣ್ಣನ್ ಅವರನ್ನು ಮೂಲ್ಕಿ ಕಸಾಪದ ವತಿಯಿಂದ ಗೌರವಿಸಲಾಯಿತು.

    ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಮೂಲ್ಕಿ ಕಸಾಪದ ಮಿಥುನ ಕೊಡೆತ್ತೂರು, ಡಾ.ಪದ್ಮನಾಭ ಭಟ್ ಎಕ್ಕಾರು, ದೇವದಾಸ ಮಲ್ಯ ಮತ್ತು ಸಚ್ಚಿದಾನಂದ ಉಡುಪ ಉಪಾಸ್ಥಿತರಿದ್ದರು. ಪ್ರಕಾಶ್ ಆಚಾರ್ ಕನ್ನಡ ಹಾಡು ಹಾಡಿದರು. ಸಂತೋಷ್ ಉಡುಪ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವ್ಯಕ್ತಿ ಪರಿಚಯ | “ಸಂಪನ್ನ ಕಲೋತ್ತಮ” ಅವಿನಾಶ್ ಬೈಪಾಡಿತ್ತಾಯ
    Next Article ಭಾಸ್ಕರ ಬಾರ್ಯರಿಗೆ ಯಕ್ಷ ಭಾರತಿ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಚಂದ್ರಹಾಸ ಕಣಂತೂರು ಇವರ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ. ಆಳ್ವೆರ್ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 13

    September 12, 2026

    ಪುಸ್ತಕ ವಿಮರ್ಶೆ | ಮಹಾಕವಿ ಭಾಸನ ‘ಕರ್ಣಭಾರ’ ಏಕಾಂಕ ನಾಟಕ

    September 12, 2026

    ಡಾ. ಡಿ.ಎಸ್. ಕರ್ಕಿ ‘ಕಾವ್ಯಶ್ರೀ ಪ್ರಶಸ್ತಿ’ಗೆ ಕವನ ಸಂಕಲನಗಳ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 15

    September 12, 2026

    ವಿಶೇಷ ಲೇಖನ | ಕನ್ನಡ ಅಕ್ಷರ ಲೋಕದ ಅಕ್ಷಯ ದೀಪ – ಹಾ. ಮಾ. ನಾಯಕ

    September 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.