ಉಡುಪಿ : ಪರ್ಯಾಯ ಶ್ರೀ ಶೀರೂರು ಮಠ ಉಡುಪಿ, ಉಡುಪಿ ಶ್ರೀ ಕೃಷ್ಣ ಮಠ ಮತ್ತು ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಹಾಗೂ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಸಾಹಿತ್ಯ ಸಮ್ಮೇಳನ 2026’ವನ್ನು ದಿನಾಂಕ 12 ಏಪ್ರಿಲ್ 2026ರಂದು ಬೆಳಿಗ್ಗೆ 9-30 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ಆವರಣದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕವಿಗೋಷ್ಠಿ, ಕಲಾ ತಿಲಕ, ಶ್ರೀ ಕೃಷ್ಣಾನುಗ್ರಹ, ರಾಜ್ಯ ಪ್ರಶಸ್ತಿ ಪ್ರದಾನ, 20 ಕೃತಿಗಳ ಲೋಕಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಮತ್ತು ಶ್ರೀ ಶಿರೂರು ಮಠ ಶ್ರೀ ಕೃಷ್ಣ ಮಠ ಉಡುಪಿ ಇವರು ಉದ್ಘಾಟನೆ ಮಾಡಿದ್ದು, ಉಡುಪಿಯ ವಿದ್ವಾನ್ ಕೆ.ವಿ. ರಮಣಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದರು. ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಡಾ. ಬಾಲಕೃಷ್ಣ ಎಸ್. ಮುದ್ದೋಡಿ, ಗಣೇಶ್ ಕುಮಾರ್, ಶ್ರೀಮತಿ ಸಂಧ್ಯಾ ರಾಣಿ ಟೀಚರ್, ಶ್ರೀಮತಿ ಕೆ. ಲಕ್ಷ್ಮೀ, ಶ್ರೀಮತಿ ಶೋಭಾ ಹರಿಪ್ರಸಾದ್, ಶ್ರೀಮತಿ ಕುಸುಮಾ ಹತ್ಯಾಳ, ಶ್ರೀಮತಿ ಸುಮಾ ಕಿರಣ್, ಅಯನಾ ವಿ. ರಮಣ್ ಮತ್ತು ಕುಮಾರಿ ವಂಶಿ ವೈ. ಕೋಟ್ಯಾನ್ ಇವರುಗಳಿಗೆ ‘ಶ್ರೀಕೃಷ್ಣಾನುಗ್ರಹ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಶ್ರೀಮತಿ ವಾಸಂತಿ ಅಂಬಲಪಾಡಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಲೇಖಕರುಗಳ ಕೃತಿ ಬಿಡುಗಡೆಗೊಳ್ಳಲಿವೆ.

