ಬೆಂಗಳೂರು : ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಶನ್ ಇದರ ವತಿಯಿಂದ ಆಯೋಜಿಸಲಾಗಿರುವ ಕನ್ನಡ ನಾಟಕ ‘ಕತ್ತಲೆ ದಾರಿ ದೂರ’ ದಿನಾಂಕ 28 ಜೂನ್ 2026ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಮೂಲ ಕಥೆ : ಆಂಟನ್ ಚೆಖೊವ್, ಕನ್ನಡ ರೂಪಾಂತರ : ಡಾ. ಆರ್. ನಾಗರಾಜ್ ಹಾಗೂ ಶ್ರೀನಿಧಿ ಬಿ.ಎಸ್. ನಿರ್ದೇಶನ ಮಾಡಿರುತ್ತದೆ. ಹೆಚ್ಚಿನ ಮಾಹಿತಿಗೆ ಶ್ರೀನಿಧಿ 9036751448 ಮತ್ತು ಶ್ರೀಪಾದ್ 9035981597 ಸಂಖ್ಯೆಗಳನ್ನು ಸಂಪರ್ಕಿಸಿರಿ.

ನಾನು ಯಾರು ?….. ಯಾರ್ ನಾನು ?….. ಅಸಲಿಗೆ, ನನ್ನ ಹಾಗೂ ಸಮಾಜದ ಸಂಬಂಧವೇನು? ಸಮಾಜದ ಆಗುಹೋಗುಗಳಿಗೂ, ನನಗೂ ಏನು ಸಂಬಂಧ ? ನನ್ನ ಅಭಿಪ್ರಾಯವೇನು ? ತೀರ್ಮಾನಿಸಲು ನನ್ನ ಆಲೋಚನೆ….. Wait…..ನನ್ನ ಆಲೋಚನೆ ನಿಜಕ್ಕೂ ನನ್ನದೇ ಆಲೋಚನೆಯೇ ? ನನ್ನದೇ ಅಭಿಪ್ರಾಯವೇ ? ಸಾಮಾಜಿಕ ಅಸಹಾಯಕಥೆಯನ್ನು ಪ್ರತಿನಿಧಿಸುವ ನಾವು, ಸಮಾಜದ ಹುಳುಕನ್ನು, ತನ್ನ ಸ್ವಂತ ಅಭಿಪ್ರಾಯವನ್ನು ಹೇಳಲಾಗುವನೇ ? ವ್ಯವಸ್ಥೆಯ, ಆಡಳಿತದ, ಆಳಲ್ಪಟ್ಟವರ ಹುಳುಕನ್ನು ಸಮಸ್ಯೆಯನ್ನು ಪ್ರಶ್ನಿಸಿದರೆ, ನಾವು ಉಳಿಯಲು ಸಾಧ್ಯವೇ ? ಆ ದಾರಿ ಸುಲಭವೇ ? ಆ ದಾರಿ ಎಷ್ಟು ದೂರ….? ಅದೇ ‘ಕತ್ತಲೆ ದಾರಿ ದೂರ’ ಇದು ಒಂದು ಹುಚ್ಚರ ಕಥೆಯಲ್ಲ….. ಒಂದು ಊರಿನ ಕಥೆ ‘ನಮ್ಮ ಕಥೆ, ನಿಮ್ಮ ಕಥೆ’
