Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026

    ಮಂಗಳೂರಿನ ಪುರಭವನದಲ್ಲಿ ‘ಸ್ವರ ಸಂಕ್ರಾಂತಿ’ ಹಿಂದೂಸ್ಥಾನಿ ಸಂಗೀತ ಕಛೇರಿ | ಜನವರಿ 14

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದಿಂದ ‘ಕವಿತಾ ಕೌತುಕ’ ಸರಣಿ ಕಾರ್ಯಕ್ರಮ
    Music

    ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದಿಂದ ‘ಕವಿತಾ ಕೌತುಕ’ ಸರಣಿ ಕಾರ್ಯಕ್ರಮ

    October 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪೈವಳಿಕೆ : ಕವಿಗಳ ಸೃಜನಶೀಲತೆಗೆ ಪ್ರೋತ್ಸಾಹ ನೀಡಲು ಮತ್ತು ಹೊಸ ತಲೆಮಾರಿನ ಬರಹಗಾರರನ್ನು ಉತ್ತೇಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕವು ಆರಂಭಿಸಿದ ವಿನೂತನ ಕಾರ್ಯಕ್ರಮ ‘ಕವಿತಾ ಕೌತುಕ’ ಸರಣಿ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 29 ಸೆಪ್ಟೆಂಬರ್ 2024ರಂದು ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ನಡೆಯಿತು.

    ನಿಸರ್ಗಧಾಮದ ಮಾಧವ ಇವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಕೆ.ಎ.ಎಂ. ಅನ್ಸಾರಿ, ಥೋಮಸ್ ಡಿ’ಸೋಜಾ, ವನಜಾಕ್ಷಿ ಪಿ. ಚೆಂಬ್ರಕಾನ, ಸೌಮ್ಯಾ ಪ್ರವೀಣ್, ಹರ್ಷಿತಾ ಎಸ್. ಶಾಂತಿಮೂಲೆ, ವಿದ್ಯಾಶ್ರೀ ಜೆ. ಕವನವಾಚನ ಮಾಡಿದರು.

    ಜೋನ್ ಡಿ’ಸೋಜಾ, ರವಿಲೋಚನ ಸಿ.ಎಚ್., ರಾಮಚಂದ್ರಭಟ್ ಪಿ., ಇಂದಿರಾ ರವಿ ಬೆಂಗಳೂರು, ಶ್ರೀಧರ ಕುಂಜತ್ತೂರು, ಮಾಲತಿ ಕಣ್ಣನ್, ರವೀಂದ್ರನಾಥ ಪಾವಲ್ಕೋಡಿ, ಚಂದ್ರಾವತಿ ದಾಮೋದರ, ಶ್ರೀರಾಮ ಭಟ್ ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ಸಮಾರೋಪ ಭಾಷಣ ಮಾಡಿದರು. ಬೆಂಗಳೂರು ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳಾ ಮಾಧವ ಸ್ವಾಗತಿಸಿ, ಕ.ಸಾ.ಪ. ಸಂಘಟನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿ, ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ ಫ್ಲೈ ಓವರ್ ತಳಭಾಗದಲ್ಲಿ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ | ಅಕ್ಟೋಬರ್ 3
    Next Article ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ರಾಜ್ಯಮಟ್ಟದ ನಾಟಕ ರಚನಾ ಶಿಬಿರ | ಅಕ್ಟೋಬರ್ 3
    roovari

    Comments are closed.

    Related Posts

    ಮಂಗಳೂರಿನ ಪುರಭವನದಲ್ಲಿ ‘ಸ್ವರ ಸಂಕ್ರಾಂತಿ’ ಹಿಂದೂಸ್ಥಾನಿ ಸಂಗೀತ ಕಛೇರಿ | ಜನವರಿ 14

    January 13, 2026

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    ಪುತ್ತೂರಿನಲ್ಲಿ ‘ಕುಮಾರವ್ಯಾಸ ಜಯಂತಿ’ ಆಚರಣೆಯ ಪ್ರಯುಕ್ತ ಗಮಕ ವಾಚನ- ವ್ಯಾಖ್ಯಾನ

    January 12, 2026

    ರಂಗಾಯಣದಲ್ಲಿ ಮೂಡಿಬಂದ ‘ಸ್ವರ-ವರ್ಣ ಸಮನ್ವಯ’ ಜುಗಲ್ ಬಂದಿ

    January 12, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.