ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ವತಿಯಿಂದ “ಕವಿತೆಯ ಮಾತು – ಅಡಿಗರ ನೆನಪು” ಒಂದು ದಿನದ ಕಾರ್ಯಾಗಾರ ದಿನಾಂಕ 15 ಫೆಬ್ರವರಿ 2025 ರಂದು ಕಾರ್ಕಳ ದ ಕೋಟಿ ಚೆನ್ನಯ ಥೀಂ ಪಾರ್ಕ್ ನ ಆವರಣದಲ್ಲಿ ನಡೆಯಿತು.
ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಸುಬ್ರಹ್ಮಣ್ಯ ಉಪಾಧ್ಯ ಬಿ. ಉಪನ್ಯಾಸ ನೀಡಿ ಮಾತನಾಡಿ “ಗೋಪಾಲ ಕೃಷ್ಣ ಅಡಿಗರು ನಾಡು ಕಂಡ ಶ್ರೇಷ್ಠ ಕವಿ. ಸಾರ್ವಕಾಲಿಕ ಮೌಲ್ಯಗಳನ್ನು ತಮ್ಮ ಬರವಣಿಗೆಯ ಮೂಲಕ ಜನರಿಗೆ ತಲುಪಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಅವರು ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ ನೀಡಿದರು” ಎಂದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ಮಾತನಾಡಿ “ಗೋಪಾಲ ಕೃಷ್ಣ ಅಡಿಗರು ‘ಯುಗ ಪ್ರಜ್ಞೆಯ ಕವಿ’ ನವ್ಯ ಪ್ರಕಾರಗಳನ್ನು ಜನಮನಗಳಿಗೆ ತಲುಪಿಸಿದ ಅವರ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಾಹಿತ್ಯದ ಬಗೆಗೆ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.
ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ 35 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ ಪ್ರಾಸ್ತವಿಕವಾಗಿ ಮಾತನಾಡಿದರು ಮತ್ತು ಅಡಿಗರ ಕೆಲವು ಕವಿತೆಗಳನ್ನು ಓದಿ ವಿವರಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.