ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ರೋಟರಿ ಕ್ಲಬ್ ಮಣಿಪಾಲ ಹಾಗೂ ಮಣಿಪಾಲ ಮಹಿಳಾ ಸಮಾಜ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ಕಾವ್ಯಕನ್ನಿಕಾ’ ಮಹಿಳಾ ಕಾವ್ಯದ ನೃತ್ಯಾಭಿವ್ಯಕ್ತಿ ಕಾರ್ಯಕ್ರಮವನ್ನು ದಿನಾಂಕ 02-06-2023ರ ಭಾನುವಾರ ಬೆಳಗ್ಗೆ 10ರಿಂದ 11.30ರವರೆಗೆ ಉಡುಪಿಯ ಕುಂಜಿಬೆಟ್ಟಿನ ಬುಡ್ನಾರು ರಸ್ತೆಯಲ್ಲಿರುವ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಕೆ.ಎಸ್. ಪವಿತ್ರ ಅವರಿಂದ ಕನ್ನಡ ಕವಯತ್ರಿಯರಾದ ಅಕ್ಕಮಹಾದೇವಿ, ವೈದೇಹಿ, ಕಮಲಾ ಹಂಪನ ಮತ್ತು ಪ್ರತಿಭಾ ನಂದಕುಮಾರ್ ಮೊದಲಾದವರ ಕವಿತೆಗಳನ್ನು ಆಧರಿಸಿದ ಉಪನ್ಯಾಸ ಪ್ರಾತ್ಯಕ್ಷಿಕೆ ಇದಾಗಿದೆ.
ಈ ಕಾರ್ಯಕ್ರಮವನ್ನು ಪ್ರಸಿದ್ಧ ಯಕ್ಷಗಾನ ಗುರುಗಳಾದ ಶ್ರೀ ಬನ್ನಂಜೆ ಸಂಜೀವ ಸುವರ್ಣ ಇವರು ಉದ್ಘಾಟಿಸಲಿದ್ದು, ಉಡುಪಿಯ ನೃತ್ಯ ಮತ್ತು ಚಿತ್ರಕಲಾವಿದರಾದ ಶ್ರೀಮತಿ ಪ್ರವೀಣ ಮೋಹನ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಶ್ರೀ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷರಾದ ಪ್ರೊ. ಶಂಕರ್, ಮಣಿಪಾಲ ಮಹಿಳಾ ಸಮಾಜದ ಅದ್ಯಕ್ಷರಾದ ಡಾ. ಸುಲತಾ ಭಂಡಾರಿ ಹಾಗೂ ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷರಾದ ಶ್ರೀಪತಿ ಪೆರೆಂಪಳ್ಳಿ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ಶ್ರೀ ರವಿರಾಜ್ ಹೆಚ್.ಪಿ. ತಮ್ಮೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ. ಸಂಪರ್ಕಕ್ಕಾಗಿ 9845240309, 9483927795