ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 18 ಎಪ್ರಿಲ್ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-13’ ಶೀರ್ಷಿಕೆಯಡಿ ಕವಿಗೋಷ್ಠಿಯನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದು, ಕೊಂಕ್ಣಿ ಭಾಷಾ ಮಂಡಳ್ ಕರ್ನಾಟಕ್ (ರಿ). ಇದರ ಅಧ್ಯಕ್ಷರಾದ ಶ್ರೀ ರೇಮಂಡ್ ಡಿಕುನ್ಹಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಖಾರ್ವಿ ಸಮುದಾಯದ ಹಿರಿಯ ಕಲಾವಿದರಾದ ಶ್ರೀ ಜೀವನ್ದಾಸ್ ಖಾರ್ವಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಿಗಳಾದ ಶ್ರೀ ಜೋರ್ಜ್ ಲಿಗೋರಿ ಡಿಸೋಜಾರವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ರೋಶನ್ ಕಾಮತ್, ಮರಿಯಾ ಪಿಂಟೊ, ವಿಲ್ಫ್ರೆಡ್ ಆರ್. ಪಾಂಗ್ಳಾ, ವೆನಿಶಾ ಜೆಸ್ಸಿಕಾ ಸಲ್ಡಾನ್ಹಾ, ರೊಬರ್ಟ್ ಮಿನೇಜಸ್, ರಾಧಿಕಾ ಪೈ, ರೆನಿಶಾ ರೋನಾ ಲೋಬೊ ಮತ್ತು ಹೆನ್ರಿ ಮಸ್ಕರೇನ್ಹಸ್ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
