ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 04 ಜುಲೈ 2026ರಂದು ‘ಕಾವ್ಯಾಂ ವ್ಹಾಳೊ -16’ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಪ್ರಾಸ್ತಾವಿಕವಾಗಿ ಮಾತಾನಾಡಿ, ಹಾಜರಿರುವ ಎಲ್ಲರನ್ನೂ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮಂಗಳೂರು ಇಲ್ಲಿನ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ನಾಯಕ್ ಇವರು ಮಾತಾನಾಡಿ “ರವಿ ಕಾಣದನ್ನು, ಕವಿ ಕಂಡ ಎಂಬ ಮಾತಿನಂತೆ ಒಬ್ಬ ಕವಿಯ ದೃಷ್ಟಿಕೋನವು ಸಾಗರದ ಆಳವನ್ನೂ ಮೀರಿದ್ದು. ಕವಿ ಹಾಗೂ ಕವಿತೆಯ ಮಹತ್ವವನ್ನು ವರ್ಣಿಸಲು ಈ ಮಾತು ಉತ್ತಮ ನಿದರ್ಶನ. ಯಾವುದೇ ಒಂದು ವಿಷಯದ ಬಗೆಗಿನ ಸಾಹಿತ್ಯವು ಅದರ ಬರಹಗಾರನ ಅದ್ಭುತ ದೃಷ್ಟಿಕೋನವನ್ನು ನಿರೂಪಿಸುತ್ತದೆ. ಇಂತಹ ಅನೇಕ ತೆರೆ-ಮರೆಯ, ಹಿರಿಯ- ಕಿರಿಯ ಸಾಹಿತಿ, ಕವಿ ಹಾಗೂ ಬರಹಗಾರರನ್ನು ಗುರುತಿಸುವಂತಹ ಕಾರ್ಯವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಡುತ್ತಿರುವುದು ಖುಷಿಯ ವಿಚಾರವೆಂದು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಕಣಿಯ ಹಿರಿಯ ಬ್ರಾಸ್ ಬ್ಯಾಂಡ್ ಕಲಾವಿದರಾಗಿರುವ ಶ್ರೀ ಮೆಲ್ವಿನ್ ಡಿಸೋಜಾ ಇವರನ್ನು ಸನ್ಮಾನಿಲಾಯಿತು.

ಖ್ಯಾತ ಕವಯಿತ್ರಿಯಾದ ಶ್ರೀಮತಿ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ರವರು ಕವಿಗೋಷ್ಠಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ಎಡಿ ಕಾಡ್ದೊಸ್ ತಾಕೊಡೆ, ಜಯಶ್ರೀ ಶೆಣೈ, ರಾಮಚಂದ್ರ ಪೈ, ಜೆನೆಲಿಯಾ ಡಿ ಅಲ್ಮೇಡಾ, ಗ್ರೇಶಿಯನ್ ಪಾಲಡ್ಕ, ಸೋನಿಯಾ ಡಿಕೋಸ್ತ, ರಾಘವೇಂದ್ರ ಪ್ರಭು ಕರ್ವಾಲು, ಜ್ಯೂಲಿಯೆಟ್ ಫೆರ್ನಾಂಡಿಸ್, ರೇಮಂಡ್ ಡಿಕೂನಾ,ತಾಕೊಡೆ, ಅಲನಿ ಡಿಸೋಜ, ವಿಲಿಯಂ ಮಾಡ್ತಾ ಅಲ್ಲಿಪಾದೆ ಮತ್ತು ಅಜಯ್ ಡಿಸೋಜ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀಮತಿ ಸಪ್ನಾ ಮೇ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾ, ಶ್ರೀ ನವೀನ್ ಲೋಬೊ ಉಪಸ್ಥಿತರಿದ್ದರು.
